ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಕೇಂದ್ರ ಸರಕಾರದಿಂದ ಕ್ರಮ

0
547

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.8: ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಕೇಂದ್ರ ಸರಕಾರ ಖಾಸಗಿಗಳಿಗೊಪ್ಪಿಸುವ ಕೆಲಸಕ್ಕೆ ಚಾಲನೆ ನೀಡಿದೆ ಎಂದು ಮೂಲಗಳು ಸೂಚನೆ ನೀಡಿವೆ. ಮೊದಲ ಹಂತದಲ್ಲಿ ಮುನ್ನೂರು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‍ಗಳ ಖಾಸಗೀಕರಣಸ ತೆಕ್ಕೆಗೆ ಸೇರಲಿವೆ. ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ತದನಂತರ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ಆರಂಭವಾಗಿದೆ ಎನ್ನಲಾಗುತ್ತಿದೆ.

ಇಂಡಿಯನ್ ಓವರ್ಸಿಸ್ ಬ್ಯಾಂಕ್ ,ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರಗಳು ಖಾಸಗೀಕರಣಗೊಳ್ಳುವ ಬ್ಯಾಂಕುಗಳ ಪಟ್ಟಿಯಲ್ಲಿವೆ ಎಂದು ಹೇಳಲಾಗುತ್ತಿದೆ. ನೀತಿ ಆಯೋಗದಲ್ಲಿ ಸಿಕ್ಕಿದ ಸೂಚನೆಯ ಅಡಿಯಲ್ಲಿ ಸರಕಾರ ಆಯ್ದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಪ್ರಗತಿಯಲ್ಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಚರ್ಚೆಯಲ್ಲಿ ಯಾವುದೇ ತೀರ್ಮಾನವಾಗಿಲ್ಲ. ದೀರ್ಘಕಾಲ ಖಾಸಗಿ ಮೂಲಬಂಡವಾಳವನ್ನು ಸಾರ್ವಜನಿಕ ಬ್ಯಾಂಕುಗಳಿಗೆ ತಂದು ಕೊಡುವ ಉದ್ದೇಶಕ್ಕಾಗಿ ಸರಕಾರ ಹೀಗೆ ಮಾಡುತ್ತಿದೆ ಎಂದು ನೀತಿ ಆಯೋಗ್‍ನಿಂದ ಸೂಚನೆ ವ್ಯಕ್ತವಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಅನುಮತಿ ಸಿಗಬೇಕಾದರೆ 1969ರಲ್ಲಿ ಜಾರಿಯಾದ ಬ್ಯಾಂಕ್ ರಾಷ್ಟ್ರೀಕರ ಕಾನೂನಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಖಾಸಗೀಕರಣದ ಮೊದಲ ಹಂತದಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ವಿವರಗಳ ಲಭಿಸಿವೆ.

ಆರ್ಥಿಕ ಕ್ಷೇತ್ರದ ಬೃಹತ್ ಕ್ರಾಂತಿಗೆ ಚಾಲನೆ ನೀಡಿದ ಕಾನೂನು ಬ್ಯಾಂಕ್ ರಾಷ್ಟ್ರೀ ಕರಣವಾಗಿತ್ತು. 1969 ಜುಲೈ 19ಕ್ಕೆ 14 ಬ್ಯಾಂಕುಗಳನ್ನು ಸಾರ್ವಜನಿಕ ಬ್ಯಾಂಕುಗಳಾಗಿ ಘೋಷಿಸಲಾಗಿತ್ತು. ಬ್ಯಾಂಕಿಂಗ್ ಕಂಪೆನೀಸ್ ಆರ್ಡಿನೆನ್ಸ್ ಎಂಬ ಹೆಸರಿನಲ್ಲಿ ವಿಶೇಷ ಕಾನೂನು ಪಾಸು ಮಾಡಿ ರಾಷ್ಟ್ರೀಕರಣ ಜಾರಿಗೆ ತರಲಾಗಿತ್ತು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.