ಮಿಝೋರಂ ಮತ ಎಣಿಕೆ ದಿನವನ್ನು ಬದಲಾಯಿಸಲು ಆಗ್ರಹ

0
245

ಸನ್ಮಾರ್ಗ ವಾರ್ತೆ

ಐಸ್ವಾಲ್: ಮಿಝೊರಂನಲ್ಲಿ ಮತ ಎಣಿಕೆ ದಿನಾಂಕ ಬದಲಾಯಿಸುವಂತೆ ರಾಜ್ಯದ ವಿವಿಧ ಚರ್ಚುಗಳು, ರಾಜಕೀಯ ಪಾರ್ಟಿಗಳು ಹಾಗೂ ಸಂಘಟನೆಗಳ ಒಕ್ಕೂಟವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಡಿಸೆಂಬರ್ 3ರಂದು ರವಿವಾರ ಮಿಝೊರಂನಲ್ಲಿ ಮತ ಎಣಿಕೆ ಇದೆ. ಇದನ್ನು ಡಿಸೆಂಬರ್ 4 ರಂದು ಮತ ಎಣಿಕೆ ಮಾಡುವಂತೆ ವಿನಂತಿಸಿದರು.

ರವಿವಾರ ತಮ್ಮ ಆರಾಧನೆಯ ದಿನವಾದುದರಿಂತ ಮತ ಎಣೆಕೆ ಬೇಡ. ಮುಂದೂಡುವಂತೆ ಸಂಘಟನೆಗಳ ಸಹಿತ ರಾಜಕೀಯ ಪಾರ್ಟಿಗಳು ಒತ್ತಾಯಿಸಿದೆ. ಮಿಝೊರಂ ಕೋಹ್ರಾನ್ ಹ್ಯುಯಿರೂಟ್ ಕಮಿಟಿ (ಎಂಕೆ ಎಚ್‍ಸಿ) ಈ ಬೇಡಿಕೆಯೊಂದಿಗೆ ಚುನಾವಣಾ ಆಯೋಗದ ಕದ ತಟ್ಟಿದೆ. ಚುನಾವಣಾ ಆಯೋಗದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ನವೆಂಬರ್ 7ರಂದು ಮಿಝೋರಂನಲ್ಲಿ ಚುನಾವಣೆ ನಡೆದಿದೆ. ಚುನಾವಣೆ ನಡೆದ 5 ರಾಜ್ಯಗಳಲ್ಲಿ ಡಿಸೆಂಬರ್ 3 ರಂದು ಚುನಾವಣಾ ಆಯೋಗ ಮತ ಎಣಿಕೆ ನಡೆಯಲಿದೆ.