ಖಾಲಿಸ್ತಾನಿ ನಾಯಕನ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ- ಕೆನಡ

0
161

ಸನ್ಮಾರ್ಗ ವಾರ್ತೆ

ಒಟ್ಟಾವ: ಏರ್ ಇಂಡಿಯಾ ವಿಮಾನಗಳಿಗೆ ಬೆದರಿಕೆ ಹಾಕಿರುವ ಖಾಲಿಸ್ತಾನಿ ಸಂಘಟನೆ ಸಿಖ್ ಫಾರ್ ಜಸ್ಟಿಸ್ ಇದರ ಮುಖ್ಯಸ್ಥ ಗುರುಪತ್‍ವಂದ್ ಸಿಂಗ್‍ರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಏರ್ ಇಂಡಿಯಾ ವಿಮಾನಗಳಿಗೆ ಸುರಕ್ಷೆ ಹೆಚ್ಚಿಸಲಾಗುವುದು ಎಂದು ಕೆನಡ ಭಾರತಕ್ಕೆ ತಿಳಿಸಿದೆ.

ನವೆಂಬರ್ 19ರಿಂದ ಏರ್ ಇಂಡಿಯಾದಲ್ಲಿ ಭಾರತಕ್ಕೆ ಪ್ರಯಾಣ ಮಾಡಬೇಡಿ ನಿಮ್ಮ ಜೀವಕ್ಕೆ ಬೆದರಿಕೆಯಾಗಬಹುದು ಎಂದು ಖಾಲಿಸ್ತಾನ್ ವಾದಿ ಪನ್ನು ಬೆದರಿಕೆ ಹಾಕಿದ್ದ.

ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ನವೆಂಬರ್ 19ಕ್ಕೆ ಬಂದ್ ಆಗಲಿದೆ ಎಂದು ಬೆದರಿಕೆ ಇದೆ. ವಿಮಾನ ನಿಲ್ದಾಣಕ್ಕೆ ಖಾಲಿಸ್ತಾನ್ ಪ್ರತ್ಯೇಕವಾದಿ ನಾಯಕ ಬಿಯಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಹೆಸರು ಇರಿಸಲಾಗುವುದು ಎಂದು ಆತ ಹೇಳಿಕೊಂಡಿದ್ದಾನೆ. ಹಮಾಸ್ ಮಾಡಿರುವಂತೆ ಭಾರತದಲ್ಲಿ ದಾಳಿ ನಡೆಸುವುದು ಮತ್ತು ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂಗೆ ದಾಳಿ ಮಾಡಲಾಗುವುದು ಎಂದು ಈ ಹಿಂದೆ ಗುರಪಂತ್‍ವಂದ್ ಸಿಂಗ್ ಬೆದರಿಕೆ ಹಾಕಿದ್ದ. ಇದರ ಹಿನ್ನೆಲೆಯಲ್ಲಿ ಪನ್ನು ವಿರುದ್ಧ ಗುಜರಾತ್ ಪೊಲೀಸ್ ಕೇಸು ದಾಖಲಿಸಿಕೊಂಡಿದ್ದಾರೆ.

ವಿಮಾನಗಳ ಮೇಲೆ ಬೆದರಿಕೆ ಒಡ್ಡಿರುವುದು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆದರಿಕೆ ಸಂದೇಶದಲ್ಲಿ ತನಿಖೆ ನಡೆಸುವುದಾಗಿ ಕೆನಡ ತಿಳಿಸಿತು. ಕೆನಡದಲ್ಲಿ ಸುಮಾರು 770,000 ಸಿಕ್ಖರು ವಾಸಿಸುತ್ತಿದ್ದಾರೆ. ಇವರು ಒಟ್ಟು ಜನಸಂಖ್ಯೆಯಲ್ಲಿ ಶೇ. 2ರಷ್ಟಿದ್ದಾರೆ.