ಮೊಹಮ್ಮದ್ ರಿಯಾಝ್ ಮೌಲವಿ ಹತ್ಯೆ: ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

0
219

ಸನ್ಮಾರ್ಗ ವಾರ್ತೆ

ಕೇರಳದಾದ್ಯಂತ ಭಾರಿ ಸದ್ದು ಮಾಡಿದ್ದ ಕಾಸರಗೋಡು ಮೊಹಮ್ಮದ್ ರಿಯಾಜ್ ಮೌಲವಿ ಅವರ ಹತ್ಯೆಗೈದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರ್ ಎಸ್ ಎಸ್ ಕಾರ್ಯಕರ್ತರೆಂದು ಹೇಳಲಾದ ಅಜೇಶ್ ಅಖಿಲೇಶ್ ಮತ್ತು ಅಖಿಲ್ ಎಂಬವರ ಮೇಲೆ ಆರೋಪ ಹೊರಿಸಲಾಗಿತ್ತು.

ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಕಳೆದ ಏಳು ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿ ಇದ್ದರು. 2017 ಮಾರ್ಚ್ 20ರಂದು ದುಷ್ಕರ್ಮಿಗಳು ಮೌಲವಿಯವರ ಕತ್ತು ಕೊಯ್ದು ಹತ್ಯೆ ಮಾಡಿದ್ದರು.

ಮಸೀದಿಯೊಳಗೆ ಮಲಗಿದ್ದ ಮೌಲವಿಯವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ತೀರ್ಪಿಗೆ ಮೌಲವಿ ಅವರ ಪತ್ನಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಕೋರ್ಟಿನ ಮುಂದೆ ಮಾಧ್ಯಮಗಳ ಜೊತೆ ಮಾತಾಡುತ್ತಾ ಕಣ್ಣೀರು ಹಾಕಿದ್ದಾರೆ. ನ್ಯಾಯಾಲಯದಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದವರು ಹೇಳಿದ್ದಾರೆ.

ಇದೆ ವೇಳೆ ಒಂದನೇ ಆರೋಪಿಯನ್ನು ಡಿಎನ್ಎ ಮೂಲಕ ಸಾಬೀತುಪಡಿಸಲಾಗಿತ್ತು. ಮೂರನೇ ಆರೋಪಿಯ ತಾಯಿ ಬೈಕ್ ತನ್ನ ಮಗನದ್ದು ಎಂದು ಹೇಳಿದ್ದರು ಮತ್ತು ನೂರಕ್ಕಿಂತಲೂ ಅಧಿಕ ಸಾಕ್ಷಿಗಳನ್ನು ಕೋರ್ಟ್ ನ ಮುಂದೆ ಇಡಲಾಗಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಒಂದನೇ ಆರೋಪಿಯ ಶರ್ಟ್ ಮತ್ತು ಲುಂಗಿಯಲ್ಲಿದ್ದ ರಕ್ತ ರಿಯಾಜ್ ಮೌಲವಿಯವರದಾಗಿತ್ತು ಎಂದು ಡಿಎನ್ಎ ಟೆಸ್ಟ್ ಮೂಲಕ ಸಾಬೀತು ಪಡಿಸಲಾಗಿದೆ ಎಂದು ನ್ಯಾಯವಾದಿ ಶಾಜಿತ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.