ನೀವು ಒಂದು ವಾರದಲ್ಲಿ ಎಷ್ಟು ಪ್ಲಾಸ್ಟಿಕ್ ಮಾಲಿನ್ಯವನ್ನು ಸೇವಿಸುತ್ತೀರಿ ಗೊತ್ತೇ? ಕಳವಳಕಾರಿ ವರದಿ

0
796

ಜಿನೀವ, ಜೂ.13: ನೀರು, ಆಹಾರದ ಮೂಲಕ ನಾವು ಒಂದು ವಾರದಲ್ಲಿ ಒಂದು ಕ್ರೆಡಿಟ್ ಕಾರ್ಡಿನಷ್ಟು ಪ್ಲಾಸ್ಟಿಕ್ ಮಾಲಿನ್ಯವನ್ನು ಸೇವಿಸುತ್ತಿದ್ದೇವೆ. ಹೆಚ್ಚು ಪ್ಲಾಸ್ಟಿಕ್ ಕುಡಿಯುವ ನೀರಿನ ಮೂಲಕ ದೇಹದ ಪಾಲಾಗುತ್ತಿವೆ. ಶೆಲ್ ಮೀನು ಸೇವನೆಯಿಂದಲೂ ಪ್ಲಾಸ್ಟಿಕ್ ಮಾನವ ದೇಹವನ್ನು ಸೇರುತ್ತದೆ ಎಂದು ಆಸ್ಟ್ರೇಲಿಯದ ನ್ಯೂಕ್ಲಿಯಸ್ ಯುನಿವರ್ಸಿಟಿಯಲ್ಲಿ ನಡೆದ ಅಧ್ಯಯನದಲ್ಲಿ ವಿವರ ಬೆಳಕಿಗೆ ಬಂದಿದೆ.

ಜಗತ್ತಿನಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‍ನ ಮೂರನೆ ಒಂದಂಶ ಪ್ರಕೃತಿಗೆ ಮರಳಿ ಬರುತ್ತಿದೆ. ನೀರಿನಿಂದ ಒಬ್ಬ ವ್ಯಕ್ತಿ ಒಂದು ವಾರದಲ್ಲಿ 1769 ಪ್ಲಾಸ್ಟಿಕ್ ತುಂಡುಗಳನ್ನು ಹೊಟ್ಟೆಗೆ ಸೇರಿಸುತ್ತಾನೆ. ಅಮೆರಿಕದ ಒಂದು ಲೀಟರ್ ಪೈಪ್ ನೀರಿನಲ್ಲಿ 9.6 ಶೇಕಡ ಪ್ಲಾಸ್ಟಿಕ್ ಫೈಬರ್ ಗಳಿವೆ. ಯುರೋಪಿಯನ್ ದೇಶಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.