ಸುನೀಲ್ ಜಾಖಡ್ ಪ್ರತಿಸ್ಪರ್ಧಿ ಎಂದು ತಿಳಿದಿದ್ದರೆ ಪುತ್ರ ಸನ್ನಿಡಿಯೋಲ್‍ರನ್ನು ಸ್ಪರ್ಧಿಸಲು ಬಿಡುತ್ತಿರಲಿಲ್ಲ- ಧರ್ಮೇಂದ್ರ

0
840

ಗುರುದಾಸ್‍ಪುರ,ಮೇ 13: ಪಂಜಾಬ್‍ನ ಗುರುದಾಸ್‍ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಜಾಖಡ್ ಎಂದು ಮೊದಲೇ ಗೊತ್ತಿರುತ್ತಿದ್ದರೆ ಅವರ ವಿರುದ್ಧ ಸನ್ನಿಡಿಯೋಲ್‍ರನ್ನು ಸ್ಪರ್ಧಿಸಲು ಅನುಮತಿ ನೀಡುತ್ತಿರಲಿಲ್ಲ ಎಂದು ನಟ, ಬಿಜೆಪಿ ವ್ಯಕ್ತಿ ಧರ್ಮೇಂದ್ರ ಹೇಳಿದರು. ಸುನೀಲ್ ಜಾಖಡ್ ಹಾಲಿ ಎಂಪಿಯಾಗಿದ್ದಾರೆ. ಪಂಜಾಬ್‍ನ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಗುರುದಾಸಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸನ್ನಿಡಿಯೋಲ್ ಸ್ಪರ್ಧಿಸುತ್ತಿದ್ದಾರೆ. “ಬಲರಾಂ ಜಾಖಡ್ ನನಗೆ ಸಹೋದರನಂತಿದ್ದವರು. ಅವರ ಪುತ್ರ ಗುರುದಾಸ್‍ಪುರದಿಂದ ಸ್ಪರ್ಧಿಸುವುದೆಂದು ಗೊತ್ತಾಗಿರುತ್ತಿದ್ದರೆ ಸನ್ನಿಡಿಯೋಲ್‍ರನ್ನು ಅವರ ವಿರುದ್ಧ ಸ್ಪರ್ಧಿಸಲು ಅನುಮತಿಸುತ್ತಿರಲಿಲ್ಲ” ಎಂದು ಧರ್ಮೇಂದ್ರ ಮಾಧ್ಯಮಗಳಿಗೆ ತಿಳಿಸಿದರು. ಸನ್ನಿಡಿಯೋಲ್ ನಾಮಪತ್ರ ಸಲ್ಲಿಸಿದ ಬಳಿಕದ ರೋಡ್ ಶೋನಲ್ಲಿ 83 ವರ್ಷದ ಧರ್ಮೇಂದ್ರ ಕೂಡ ಭಾಗವಹಿಸಿದ್ದರು. ಗುರದಾಸಪುರ ಸಂಸದರಾಗಿದ್ದ ವಿನೋದ್ ಖನ್ನಾ ನಿಧನರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಸುನೀಲ್ ಜಾಖಡ್ ವಿಜಯಿಯಾಗಿದ್ದರು. ಮೇ ಹತ್ತೊಂಬತ್ತಕ್ಕೆ ಗುರುದಾಸಪುರದಲ್ಲಿ ಮತದಾನ ನಡೆಯಲಿದೆ.