ಪ. ಬಂಗಾಳ: ರಾಜ್ಯಪಾಲರನ್ನು ತೆಗೆಯುವಂತೆ ರಾಷ್ಟ್ರಪತಿಗೆ ಪತ್ರ ಬರೆದ ಟಿಎಂಸಿ ಸಂಸದರು

0
468

ಸನ್ಮಾರ್ಗ ವಾರ್ತೆ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿ ಐವರು ಟಿಎಂಸಿ ಸಂಸದರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲರು “ಸಂವಿಧಾನವನ್ನು ಸಂರಕ್ಷಿಸಲು, ರಕ್ಷಿಸಲು ಮತ್ತು ರಕ್ಷಿಸಲು ವಿಫಲರಾಗಿದ್ದಾರೆ ಮತ್ತು ಸುಪ್ರೀಂ ಕೋರ್ಟ್ ಘೋಷಿಸಿದ ಕಾನೂನನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲ ಜಗದೀಪ್ ಧಂಕರ್ ರವರು ಪಶ್ಚಿಮ ಬಂಗಾಳದ ವಿಧಾನ ಸಭೆಯು ಆಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕುತ್ತಿಲ್ಲ ಮಾತ್ರವಲ್ಲ, ಅವರು ಸ್ಪೀಕರ್‌ನಿಂದ ‘ವಿವರಣೆಯನ್ನು’ ಕೇಳುತ್ತಿದ್ದಾರೆ. ಇದು ರಾಜ್ಯ ಶಾಸಕಾಂಗದ ಸಾರ್ವಭೌಮತ್ವದ ಮೇಲೆ ನೇರ ಅವಮಾನ ಮತ್ತು ದಾಳಿಯಾಗಿದೆ ”ಎಂದು ಪಶ್ಚಿಮ ಬಂಗಾಳದ ಟಿಎಂಸಿ ಸಂಸದರಾದ ಸುಖೇನ್ದು ಶೇಖರ್ ರಾಯ್, ಸುದೀಪ್ ಬಂದ್ಯೋಪಾಧ್ಯಾಯ್, ಡೆರಿಕ್ ಓಬ್ರಿಯಾನ್, ಕಲ್ಯಾಣ್ ಬ್ಯಾನರ್ಜಿ ಕಾಕೋಳಿ ಘೋಷ್ ದಸ್ತೀದಾರ್ ಸಹಿ ಹಾಕಿ ರಾಷ್ಟ್ರಪತಿಯವರಿಗೆ ಕಳುಹಿಸಿರುವ ಪತ್ರದಲ್ಲಿ ವಿವರಣೆ ನೀಡಿರುವುದಾಗಿ ತಿಳಿದು ಬಂದಿದೆ.

ಮುಂಬರುವ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿದೆ. ರಾಜ್ಯಪಾಲ ಜಗದೀಪ್ ಧಂಕರ್ ರವರ ಹಿಂದೆ ಬಿಜೆಪಿ ಕೆಲಸ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.