ಮತ್ತೆ ತೆರಿಗೆ ಅಸ್ತ್ರ ಹೊರ ತೆಗೆದ ಟ್ರಂಪ್

0
339

✍️ ಶಾಝಿಲ್ ಉಸ್ಮಾನ್

ಅಮೆರಿಕದ ಏಕಪಕ್ಷೀಯ ನಿಲುವುಗಳನ್ನು ಜಾಗತಿಕ ಅಭಿವೃದ್ಧಿಶೀಲ ದೇಶಗಳ ಒಕ್ಕೂಟವು ಪ್ರತಿಭಟಿಸಿರುವಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಕ್ಸ್ ದೇಶಗಳ ವಿರುದ್ಧ ತಿರುವೆಯನ್ನು ಶೇ. 10ರಷ್ಟು ಹೆಚ್ಚಿಸುವೆ ಎಂದು ಘೋಷಿಸಿದ್ದಾರೆ ಮತ್ತು ನಂತರ ಜಗತ್ತಿನ ರಾಜಕೀಯದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ. ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳನ್ನೆಲ್ಲ ಗಾಳಿಗೆ ತೂರಿ ತನಗೆ ತೋಚಿದಂತೆ ರಫ್ತು ಸುಂಕ ಹೊರಿಸಿ ಮತ್ತು ಇತರ ಪಕ್ಷಪಾತದ ನಡವಳಿಕೆ ತೋರಿಸುತ್ತಿರುವ ಅಮೆರಿಕದ ನಿಲುವಿನ ವಿರುದ್ಧ ಬ್ರಿಕ್ಸ್ ದೇಶಗಳು ರವಿವಾರ ಆತಂಕ ವ್ಯಕ್ತಪಡಿಸಿತ್ತು. ಬ್ರಿಕ್ಸ್ ಶೃಂಗ ಬ್ರಝಿಲ್‌ನ ರಿಯೊಡಿಜನೈರದಲ್ಲಿ ನಡೆದಿತ್ತು. ಭಾರತ ಸಹಿತ ಚೀನ, ರಷ್ಯ, ಬ್ರೆಝಿಲ್ ಹೀಗೆ ಹತ್ತು ದೇಶಗಳು ಅಮೆರಿಕದ ತೆರಿಗೆ ನೀತಿಯನ್ನು ವಿರೋಧಿಸಿ ಸಹಿ ಹಾಕಿವೆ. ಅಮೆರಿಕದ ವಿರುದ್ಧ ನಿಲುವನ್ನು ಕೈಗೊಂಡ ದೇಶಗಳಿಗೆ ಶೇ. 10 ಹೆಚ್ಚು ತೆರಿಗೆ ಹಾಕುವೆ ಎಂದು ಟ್ರಂಪ್ ಬೆದರಿಕೆಯೊಂದಿಗೆ ಪುರ ಪ್ರವೇಶ ಮಾಡಿದ್ದಾನೆ.

ಬ್ರಿಕ್ಸ್ ಶೃಂಗದಲ್ಲಿ ಅಮೆರಿಕದ ಹೆಸರು ಎತ್ತಿರಲಿಲ್ಲ. ನಿರ್ಬಂಧ ದಿಗ್ಬಂಧದಂತಹ ಕ್ರಮಗಳಿಂದ ಹಿಂದೆ ಸರಿಯಬೇಕೆಂದೂ ಬ್ರಿಕ್ಸ್ ಆಗ್ರಹಿಸಿತು. ಟ್ರಂಪ್ ಬ್ರಿಕ್ಸ್ ಅನ್ನೇ ಅಣಕಿಸುತ್ತಾ ಎಕ್ಸಿನಲ್ಲಿ ಹೀಗೆ ಬರೆದರು- ಅಮೆರಿಕ ಡಾಲರಿಗೆ ಬದಲಿಯನ್ನು ಹುಡುಕುವ ಕ್ರಮ ಚರ್ಚೆಯಲ್ಲಿ ಮುನ್ನಲೆಗೆ ಬಂದದ್ದರಿಂದ ಈ ವರ್ಷದ ಮೊದಲಲ್ಲೇ ಶೇ. 100 ರಫ್ತು ಸುಂಕ ಹಾಕುವುದಾಗಿ ಬ್ರಿಕ್ಸ್ ಒಕ್ಕೂಟಕ್ಕೆ ಟ್ರಂಪ್ ಈ ಹಿಂದೆ ಗುದ್ದಿದ್ದರು. ಇದು ಅಮೆರಿಕದ ಎದುರು ನಿಲ್ಲಲು ಯಾರನ್ನೂ ಬಿಡುವುದಿಲ್ಲ ಎಂಬ ಬಹಿರಂಗ ಘೋಷಣೆಯಾಗಿದೆ.

ಬ್ರಿಕ್ಸ್ ಹಳೆಯ ಆಲಿಪ್ತ ನೀತಿಯ ಮುಂದುವರಿಕೆಯಾಗಿದೆ. ಶಾಂತಿ ಆಧಾರಿತ ಅಂತಾರಾಷ್ಟ್ರೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಗುರಿ ಆಗಿದೆ ಎಂದು ಬ್ರಿಕ್ಸ್ ಶೃಂಗದ ಅತಿಥಿ ದೇಶದ ಅಧ್ಯಕ್ಷ ಲುಲ ಡ ಸಿಲ್ವಾ ಹೇಳಿದ್ದಾರೆ. ಅಭಿವೃದ್ಧಿಗಿಂತ ಹೆಚ್ಚು ಯುದ್ಧಕ್ಕೆ ಹಣ ಖರ್ಚು ಮಾಡುವ ಅಮೆರಿಕದ ಅಭ್ಯಾಸ ವನ್ನು ಲುಲ ಡ ಸಿಲ್ವಾ ಟೀಕಿಸಿದ್ದಾರೆ. ಬಹುಮುಖಿ ದೇಶ ವ್ಯವಸ್ಥೆಯು ಅಸಾಮಾನ್ಯ ರೀತಿಯಲ್ಲಿ ಪತನಗೊಂಡದ್ದನ್ನು ಜಗತ್ತು ನೋಡ್ತಾ ಇದೆ. ಮತ್ತು ಅಂತಾರಾಷ್ಟ್ರೀಯ ಬಹುಧ್ರುವೀಯ ಕ್ರಮವನ್ನು ಒಪ್ಪಿಕೊಳ್ಳದಿದ್ದರೆ ನಾವೇ ಅದಕ್ಕೆ ಮುಂದೆ ಬಂದು ನಿಲ್ಲುತ್ತೇವೆ ಎಂದು ಲುಲ ಡ ಸಿಲ್ವ ಹೇಳಿದ್ದಾರೆ.

ಯಾಕೆಂದರೆ ಇದುವೇ 21ನೇ ಶತಮಾನದ ನಿಜ ಸ್ಥಿತಿಯಾಗಿದೆ. ಬ್ರಿಕ್ಸ್ ಇದರಲ್ಲಿ ಹಿಂದೆ ಬೀಳದು. ಹಮಾಸ್ 2023 ಅಕ್ಟೋಬರ್ ಏಳಕ್ಕೆ ಇಸ್ರೇಲಿನ ಮೇಲೆ ದಾಳಿ ಮಾಡಿದ್ದನ್ನು ಬ್ರಿಕ್ಸ್ ಖಂಡಿಸಿತು. ಹಾಗಿದ್ದರೂ ಇಸ್ರೇಲ್ ಗಾಝದಲ್ಲಿ ನಡೆಸುತ್ತಿರುವ ವಂಶ ಹತ್ಯೆಯನ್ನು ಕಟು ಭಾಷೆ ಯಲ್ಲಿಯೇ ಲುಲ ಟೀಕಿಸಲು ಹಿಂದೆ ಬೀಳಲಿಲ್ಲ.

ನಿರಪರಾಧಿಗಳನ್ನು ವಿವೇಕ ಶೂನ್ಯರಂತೆ ಕೊಲ್ಲುತ್ತಾ ಹೋಗುವುದು ಹಸಿವನ್ನು ಯುದ್ಧಾಯುಧವಾಗಿ ಪ್ರಯೋಗಿಸುವುದು, ನೋಡಿಲ್ಲ ಎಂಬಂತೆ ನಟಿಸಬಹುದಾದ ಕ್ರಮ ಇದಲ್ಲ ಎಂದು ಬ್ರಝಿಲ್ ಅಧ್ಯಕ್ಷರು ಹೇಳಿದರು.

ಇರಾನಿನ ಮೇಲೆ ಅಮೆರಿಕ, ಇಸ್ರೇಲುಗಳು ನಡೆಸಿದ ದಾಳಿಯನ್ನು ಬ್ರಿಕ್ಸ್ ಖಂಡಿಸಿದೆ. ಇದರ ನಂತರವೇ ಇರಾನ್ ಸಹಿತ ದೇಶಗಳಿರುವ ಬ್ರಿಕ್ಸ್‌ಗೆ ಅಮೆರಿಕ ವಿರೋಧಿ ಲೇಪವನ್ನು ಮತ್ತು ಹೆಚ್ಚು ತಿರುವೆಯನ್ನು ಟ್ರಂಪ್ ಘೋಷಿಸಿದ್ದಾರೆ.

ಕಳೆದ ಎಪ್ರಿಲ್ ಎರಡಕ್ಕೆ ಟ್ರಂಪ್ ಘೋಷಿಸಿದ ರಫ್ತು ತೆರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹಿಡಿದು ಕುಲುಕಿತು. ವ್ಯಾಪಕ ಟೀಕೆಗೂ ತುತ್ತಾ ಯಿತು. ಇದರ ನಂತರ ಟ್ರಂಪ್ ತನ್ನ ನಿರ್ಧಾರ ವನ್ನು ಮೂರು ತಿಂಗಳಿಗೆ ಮುಂದೂಡಿದರು. ಟ್ರಂಪ್ ಘೋಷಿಸಿದ ತೆರಿಗೆ ಯಾವಾಗ ಜಾರಿಗೆ ಬರುತ್ತದೆ ಎಂಬ ವಿಷಯ ಅನಿಶ್ಚಿತತೆಯಲ್ಲಿ ಇದೆ. ಹೊಸ ಟ್ಯಾರಿಫ್ ಕುರಿತು ಪತ್ರಗಳನ್ನು ಈ ತಿಂಗಳ ಒಂಬತ್ತನೇ ತಾರೀಕಿಗೆ ಕೊಡುವೆ ಎಂದು ಟ್ರಂಪ್ ಹೇಳಿದ್ದಾರೆ.

ಅಂದರೆ ಆಗಸ್ಟ್ ಒಂದರಿಂದ ಹೊಸ ತೆರಿಗೆ ದರ ಜಾರಿಗೊಳ್ಳುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಇದರಂತೆ ಹತ್ತು ಪರ್ಸಂಟ್ ಹೆಚ್ಚು ತೆರಿಗೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ದು ಏನಾಗುತ್ತದೆ ಎಂಬುದು ಸ್ಪಷ್ಟತೆಗಳಿಲ್ಲದೆ ಉಳಿದಿದೆ. ಟ್ರಂಪ್ ಬಾಯಿಗೆ ಬಂದಂತೆ ಹೇಳುತ್ತಾ ಹೋಗುತ್ತಿದ್ದಾರೆ ಎಂಬ ಗುಮಾನಿ ಅಮೆರಿಕದ ಪರಮ ಮಿತ್ರ ದೇಶವಾದ ಜಪಾನ್ ಟೀಕಿಸಿದ್ದರಿಂದ ಮೇಲೆದ್ದು ನಿಂತಿದೆ. ಚೀನ ಟೀಕಿಸಿದ್ದರೂ ಅದು ಅಮೆರಿಕದ ಗೆಳೆಯ ಅಲ್ಲ. ಅಮೆರಿಕ ಬಿಟ್ಟು ಇತರ ಮಾರುಕಟ್ಟೆಗೆ ವ್ಯಾಪಾರ ವಿಸ್ತರಿಸಲು ಜಪಾನಿನ ಪ್ರತಿಪಕ್ಷ ಸರಕಾರದ ಮೇಲೆ ಒತ್ತಡ ಹೇರತೊಡಗಿದ್ದು ಈಗಿನ ಹೆಚ್ಚುವರಿ ಬೆಳವಣಿಗೆಯಾಗಿದೆ.

ಟ್ರಂಪ್ ಹೇಳಿಕೆ ಭಾರತದ ಎದೆ ಬಡಿತ ಹೆಚ್ಚಿಸುವಂತೆ ಮಾಡಬಹುದಾ? ಬ್ರಿಕ್ಸ್ನಲ್ಲಿ ಭಾರತ ಇದೆ. ಹೀಗಿದ್ರೂ ಅಮೆರಿಕ ಮತ್ತು ಭಾರತ ವ್ಯಾಪಾರದ ಚರ್ಚೆ ನಡೆಸುತ್ತಿರುವುದು ಹೌದು. ಆದರೆ ಅದರ ಫಲಿತಾಂಶ ಏನು ಗೊತ್ತಾಗಿಲ್ಲ. ಟ್ರಂಪ್ ಈಗಾಗಲೇ ಹತ್ತು ಪರ್ಸಂಟ್ ಹೆಚ್ಚು ತೆರಿಗೆ ಬ್ರಿಕ್ಸ್‌ನ ಮುಖಕ್ಕೆ ಗುದ್ದಿದ್ದಾರೆ. ಅದು ಇಂಡಿಯಕ್ಕೂ ಅನ್ವಯಿಸುತೋ ಗೊತ್ತಿಲ್ಲ.