ಕೊನೆಗೂ ಸೋಲೊಪ್ಪಿದ ಟ್ರಂಪ್: ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭ

0
509

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.24: ತಮ್ಮದೇ ಪಕ್ಷ ಹಾಗೂ ವಿರೋಧ ಪಕ್ಷಗಳು ಹೇಳಿದರೂ ಅಧಿಕಾರ ಹಸ್ತಾಂತರಕ್ಕೆ ಒಪ್ಪದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಸೋಲೊಪ್ಪಿಕೊಂಡಿದ್ದು ಪ್ರತಿಸ್ಪರ್ಧಿ ಚುನಾವಣೆಯಲ್ಲಿ ಗೆದ್ದಿರುವ ಡೆಮಕ್ರಾಟಿಕ್ ಪಾರ್ಟಿಯ ಜೊ ಬೈಡನ್‍ರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಮೊದಲು ಟ್ರಂಪ್‍ರನ್ನು ಅವರ ರಿಪಬ್ಲಿಕನ್ ಪಾರ್ಟಿಯಿಂದ ಕೆಲವರು ಬೆಂಬಲಿಸಿದ್ದರು ನಂತರ ಅವರು ದೂರವಾದರು. ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಜೊ ಬೈಡನ್‍ರ ಕಚೇರಿಗೆ ತಿಳಿಸಿದ್ದಾರೆ. ಅಧಿಕಾರ ಹಸ್ತಾಂತರಕ್ಕೆ ವೈಟ್ ಹೌಸ್ ಅಧಿಕಾರಿಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ.

ಸೋಮವಾರ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿ ಸೂಚಿಸಿದರೆಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದರು. ಇದರ ಅಂಗವಾಗಿ ಬೈಡನ್ ಕಚೇರಿಗೆ 63 ಲಕ್ಷ ಡಾಲರ್ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಮಿಷಿಗನ್ ಸ್ಟೇಟ್‍ನಲ್ಲಿ ಬೈಡನ್ ಪರ ಫಲಿತಾಂಶ ಹೊರಬಂದ ನಂತರ ಟ್ರಂಪ್‍ರ ಮನಪರಿವರ್ತನೆಯಾಗಿದೆ ಎಂದು ಹೇಳಲಾಗುತ್ತಿದ್ದು, ಬೈಡನ್ ಟ್ರಂಪ್‍ರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.