ಇಸ್ರೇಲ್ ಕ್ರೌರ್ಯಕ್ಕೆ ಸಾಕ್ಷಿಯಾದ ಇಬ್ಬರು ಮಕ್ಕಳು

0
563

✍️ ಶಾಝಿಲ್ ಉಸ್ಮಾನ್

ಈ ಮಕ್ಕಳಿಬ್ಬರೂ ಬಲಿಪುಶುಗಳು. ಮಕ್ಕಳ ಸರ್ವನಾಶಕ್ಕೆ ಇಸ್ರೇಲ್ ಇಳಿದುದರ ಬಲಿಪಶುಗಳು ಇವರಿಬ್ಬರೂ ಆಗಿದ್ದಾರೆ. ನೋಡಿ ಈತ ಅಬೂ ಕುವೈಕ್. ಗಾಝದ ಬಾಲಕ, ಇವನು ಅಲಿ ಖಲೀಫ. ದಕ್ಷಿಣ ಲೆಬನಾನ್‌ನ ಮಗು. ಈಗ ಮೂರೇ ವರ್ಷ. ಒಡಹುಟ್ಟಿದವರು ಕುಟುಂಬ ದಿಂದ ಶಾಶ್ವತವಾಗಿ ಪ್ರತ್ಯೇಕಿಸಲ್ಪಟ್ಟು ನೂರಾರು ಮೈಲುಗಳ ದೂರದಲ್ಲಿ ಅವರಿಬ್ಬರೂ ಈಗ ಒಟ್ಟಿಗೆ ಇದ್ದಾರೆ.

ಈಗ ಮೂರು ವಯಸ್ಸಿನ ಅಲಿ ತನ್ನ ಪ್ಲಾಸ್ಟಿಕ್ ಕೈ ಬಳಸುವಾಗ ತಡವರಿಸುತ್ತಾನೆ. ಆರು ವಯಸ್ಸಿನ ಉಮರ್ ಅಲಿಗೂ ಒಂದು ಕೃತಕ ಕೈ ಹೆಚ್ಚು ವಿಳಂಬವಿಲ್ಲದೆ ಕೊಡುವ ಏರ್ಪಾಟು ಆಗುತ್ತಿದೆ. ಅವನಿಗೂ ಸಿಗುವ ಉಡುಗೊರೆಗಳನ್ನು ಓಪನ್ ಮಾಡಲು ಆ ಕೃತಕ ಕೈ ಸಹಾಯ ಮಾಡಬಹುದು. ಇಸ್ರೇಲಿನ ಬಾಂಬು ದಾಳಿಯಲ್ಲಿ ಇಬ್ಬರ ಕೈಗಳೂ ಕತ್ತರಿಸಲ್ಪಟ್ಟಿವೆ. ಒಡಹುಟ್ಟಿದ ಸಹೋದರರು ಇವರಲ್ಲ. ಆದರೆ ಇಲ್ಲಿ ಇವರು ಒಡಹುಟ್ಟಿದ ಸಹೋದರರಂತೆ ಇದ್ದಾರೆ. ಬೈರೂತಿನ ಗಜಿಬಿಜಿಯಿರುವ ಹಮ್ರಾದಲ್ಲಿ ಒಂದು ಅಪಾರ್ಮೆಂಟಿನಲ್ಲಿ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಾರೆ.

ಇಬ್ಬರನ್ನೂ ಅವರ ಮನೆಯ ಅವಶೇಷಗಳಡಿಯಿಂದ ಅರೆ ಜೀವದೊಂದಿಗೆ ಹೊರತೆಗೆಯಲಾಗಿತ್ತು. ಇಬ್ಬರದೂ ತಂದೆ-ತಾಯಿಯರನ್ನು ಇಸ್ರೇಲ್ ಕೊಂದು ಹಾಕಿತ್ತು. ಈಗ ಅವರಿಬ್ಬರೂ ಅತ್ತೆಯ ಸಂರಕ್ಷಣೆಯಲ್ಲಿ ಇದ್ದಾರೆ. ಗಾಝದಿಂದ ಉಮರ್‌ರನ್ನು ಲೆಬನಾನಿಗೆ ಕರೆದುಕೊಂಡು ಬಂದ ಮಾಹರಿಗೆ ಹದಿಹರೆಯ ಪ್ರಾಯದ ಸ್ವಂತ ಮಗಳು ನಷ್ಟವಾಗಿದ್ದಾಳೆ.

ಕುಟುಂಬದ ಇತರ ಮಂದಿ ಕೊಲ್ಲಲ್ಪಟ್ಟಿದ್ದಾರೆ. ಸ್ವಂತ ಮಕ್ಕಳಿಲ್ಲದ ಸೋಭಿ ಎಂಬ ಮಹಿಳೆ ಮಗು ಅಲಿಯನ್ನು ಸಾಕುವುದಕ್ಕೆ ತೀರ್ಮಾನಿಸಿದರು. ಅವನಿಗೆ ಮೂರು ವರ್ಷ ಈಗ. ನನ್ನ ತಂದೆ ತಾಯಿಯನ್ನು ಯಾವಾಗ ನೋಡಲು ಆಗುತ್ತದೆ ಎಂದು ಕೇಳುತ್ತಿರುತ್ತಾನೆ. ಆಗ ಅವರು ನಿನ್ನನ್ನು ನೋಡುತ್ತಿದ್ದಾರೆ. ನಿನಗೆ ಅವರನ್ನು ನೋಡಲು ಆಗುವುದಿಲ್ಲ ಎಂದು ಅತ್ತೆ ಹೇಳಿಕೊಟ್ಟು ಸಂತೈಸುತ್ತಾರೆ.

ಅವರದ್ದು ಮೂರು ಮಹಡಿಯ ಕಟ್ಟಡ. ಒಂದು ಕಾಲದಲ್ಲಿ ಮಕ್ಕಳ ತುಂಟತನದಿಂದ ತುಂಬಿಕೊಂಡಿದ್ದ ಮನೆ ಅದು. ಅಲಿ ದಕ್ಷಿಣ ಲೆಬನಾನಿನ ಸರಫಾನ್‌ಡಿಯ ತನ್ನ ಕುಟುಂಬದ ಮನೆಯಲ್ಲಿ ಹುಟ್ಟಿದ್ದ. ಕಳೆದ ಅಕ್ಟೋಬರ್ 29ಕ್ಕೆ ಆ ಘಟನೆ ನಡೆದದ್ದು. ಅದನ್ನು ನೆನೆದು ಸೋಭಿ ಹೇಳಿದರು.
ಅಂದಿನ ಬೆಳಗು ಶಾಂತವಾಗಿತ್ತು. ಬೆಳಗ್ಗೆ ಎಂಟು ಕಾಲು ಗಂಟೆಗೆ ಇಸ್ರೇಲಿನ ಶೆಲ್ ಬಂದು ಬಡಿಯಿತು. ರಕ್ಷಣಾ ಕಾರ್ಯಕರ್ತರು ಹಗಲಿಡೀ ಕೆಲಸ ಮಾಡಿ ಕಾಂಕ್ರಿಟ್ ಸ್ಟೀಲ್ ಕತ್ತರಿಸಿ ತೆಗೆದರು. ಇಸ್ರೇಲಿನ ದಾಳಿಯಾಗಿ ಹದಿನಾಲ್ಕು ಗಂಟೆಯ ನಂತರ ಎರಡು ವರ್ಷದ ಅಲಿ ಅವಶೇಷಗಳಡಿಯಲ್ಲಿ ಬದುಕಿ ಉಳಿದಿರುವುದು ಕಂಡು ಬಂತು. ಅವನ ಪುಟ್ಟ ದೇಹ ಬಾಡಿ ಹೋಗಿತ್ತು. ಕೈ ಕತ್ತರಿಸಲ್ಪಟ್ಟಿತ್ತು. ಸ್ವಲ್ಪ ಉಸಿರಾಟ ಇತ್ತು.

ಒಂದು ವಾರದವರೆಗೆ ಅವನು ಪ್ರಜ್ಞೆ ತಪ್ಪಿಯೇ ಇದ್ದ. ಕೃತಕ ಉಸಿರಾಟ ವ್ಯವಸ್ಥೆಯೊಂದಿಗೆ ಜೀವ ಉಳಿಸುವ ಪ್ರಯತ್ನ ಮಾಡಿದ್ದು. ಹೇಗೂ ಕೊನೆಗೆ ಕಣ್ಣು ತೆರೆದಾಗ ಅವನು ತಂದೆ ತಾಯಿಯಗಳನ್ನು ಹುಡುಕಿ ಕೈ ಉದ್ದ ಮಾಡಿದಾಗ ಅದರಲ್ಲಿ ಒಂದು ಕೈ ಇರಲಿಲ್ಲ. ಕುಟುಂಬದ ಅತ್ತೆ ಹೊರತು ಹದಿಮೂರು ಮಂದಿಯನ್ನು ಇಸ್ರೇಲ್ ಶೆಲ್ ದಾಳಿ ಕೊಂದು ಹಾಕಿತ್ತು. ಫೆಲಸ್ತೀನಿನ ಬ್ರಿಟಿಷ್ ಸರ್ಜನ್ ಡಾ. ಗಝಾನ್ ಅಬು ಸಿತ್ತ, ಲೆಬನಾನಿನಲ್ಲಿ ಅಲಿಯನ್ನು ಚಿಕಿತ್ಸಿಸಿದರು. ಅವರು ಸ್ಥಾಪಿಸಿದ ಚ್ಯಾರಿಟಿ ಚಿಲ್ಡ್ರನ್ಸ್ ಫಂಡ್ ಮೂಲಕ ಚಿಕಿತ್ಸೆ ನಡೆಯಿತು.

ಈ ಫಂಡ್ ಸಹಾಯ ಮಾಡಿದ ಹತ್ತೊಂಬತ್ತು ಫೆಲೆಸ್ತೀನಿ ಮಕ್ಕಳಲ್ಲಿ ಗಾಝದ ಆರು ವರ್ಷದ ಉಮರ್ ಅಬೂ ಕುವೈಕ್ ಒಬ್ಬ. ಅವನಿಗೆ ಕೃತಕ ಕೈ ಹಾಕಿಲ್ಲ. ಕಳೆದು ಹೋದ ನೆನಪುಗಳು ತುಂಬ ನೋವು ಕೊಡುತ್ತಿವೆ. ಆದರೆ ಮರೆಯಲು ಬಯಸುವೆ ಎಂದು ಅವನ ಜವಾಬ್ದಾರಿ ಹೊತ್ತ ಮೆಹ ಹೇಳಿದರು.

2023 ಡಿಸೆಂಬರ್ ಆರಕ್ಕೆ ಬೆಳಗ್ಗೆ ಮೊದಲ ಮಿಸೈಲು ಬಂದಪ್ಪಳಿಸಿತು. ಕುವೈಕ್ ಮನೆ ನಾಲ್ಕು ಮಹಡಿಯದ್ದಾಗಿತ್ತು. ಕುಟುಂಬ ಬೆಳಗಿನ ತಿಂಡಿ ತಿನ್ನುತ್ತಿತ್ತು. ಉಮರ್ ಹೊರಗೆ ಸೈಕಲ್ ಓಡಿಸುತ್ತಿದ್ದ. ಬಾಂಬು ಬಂದು ಬಿದ್ದಾಗ ಅವನು ಎಸೆಯಲ್ಪಟ್ಟ. ರಕ್ಷಣಾ ಕಾರ್ಯಕರ್ತರಿಗೆ ಅವಶೇಷ ಗಳಡಿಯಲ್ಲಿ ಅವನು ಮಾತ್ರ ಜೀವಂತವಾಗಿ ಸಿಕ್ಕಿದ. ಅವನ ಕೈ ಹೋಯಿತು. ಜೀವ ಉಳಿಯಿತು. ಆ ಕಟ್ಟಡದಲ್ಲಿ ಹದಿನೈದು ಮಂದಿ ಇದ್ದರು. ಅವರಲ್ಲಿ ಉಮರ್ ಮಾತ್ರ ಈಗ ಉಳಿದಿರುವುದು.

ಗಾಝದ ಹತ್ತೊಂಬತ್ತು ಮಕ್ಕಳು, 158 ಲೆಬನೀಸ್ ಮಕ್ಕಳ ಸಹಿತ 180 ಮಂದಿಯನ್ನು ಡಾ. ಗಝ್ಜಾನ್ ಅಬೂ ಸಿತ್ತರ ಚಿಲ್ಡ್ರನ್ಸ್ ಫಂಡ್ ಲೆಬನಾನಿನಲ್ಲಿ ಚಿಕಿತ್ಸೋಪಚಾರ ನೀಡುತ್ತಿದೆ. ಇಸ್ರೇಲಿನ ಬಾಂಬು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರೇ ಇವರೆಲ್ಲರೂ. ಸ್ನಿಪ್ಪರ್ ಫಯರ್, ಟ್ಯಾಂಕ್ ಶೆಲ್‌ಗಳೂ, ಪಿರಂಗಿ ಸ್ಫೋಟಗಳ ಕಲೆಗಳೊಂದಿಗೆ ಅವರು ಇಲ್ಲಿ ಜೀವಿಸುತ್ತಿದ್ದಾರೆ. ಕೆಲವರು ಅನಾಥರು. ಉಳಿದವ ರಿಗೆ ಗಾಝದಲ್ಲಿ ಅಥವಾ ದಕ್ಷಿಣ ಲೆಬನಾನಿನಲ್ಲಿ ಈಗಲೂ ಸಂಬಂಧಿಕರಿದ್ದಾರೆ. ಹೆಚ್ಚಿನವರು ಅಳಿದುಳಿದ ಕುಟುಂಬದೊಡನೆ ಈಜಿಪ್ಟಿಗೆ ರಫಾ ಕ್ರಾಸಿಂಗ್ ಮೂಲಕ ಹೊರ ಹೋದವರು ಆಗಿದ್ದಾರೆ. ಎಲ್ಲರಿಗೂ ಇರಲು ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ ಇವಕ್ಕೆಲ್ಲ ಚಿಲ್ಡçನ್ ಫಂಡ್ ಬೆಂಬಲ ನೀಡುತ್ತಿದೆ. ಗಾಝದಲ್ಲಿ ಕಿರಾತಕ ಇಸ್ರೇಲ್ ಎರಡು ವರ್ಷದಲ್ಲಿ 20,179 ಮಕ್ಕಳನ್ನು ಕೊಂದಿದೆ. 12 ಲಕ್ಷ ಮಕ್ಕಳು ಹಸಿವಿ ನಿಂದಿದ್ದಾರೆ. 58,554 ಮಕ್ಕಳು ಅನಾಥರಾಗಿದ್ದಾರೆ. ಇಂತಹ ಮಕ್ಕಳಲ್ಲಿ ಈ ಅಲಿ ಮತ್ತು ಅಬೂ ಕುವೈಕ್ ಸೇರಿದ್ದಾರೆ.