“ಕೊರೋನ ಬಂದು ಹೋಗಲಿ ಎಂಬ ನಿಲುವು ಅಪಾಯಕಾರಿ”- ವಿಶ್ವ ಆರೋಗ್ಯ ಸಂಘಟನೆ

0
367

ಸನ್ಮಾರ್ಗ ವಾರ್ತೆ

ಜಿನೀವಾ: ಕೊರೋನ ಬಂದು ಹೋಗಲಿ ಎಂಬ ನಿಲುವು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅದಾನೊ ಗೆಬ್ರಿಯೊಸಸ್ ಹೇಳಿದ್ದಾರೆ. ಕೊರೋನ ಬಂದರೆ ಪ್ರತಿರೋಧ ಶಕ್ತಿ ಸಿಗುತ್ತದೆ ಎಂಬ ಪ್ರಚಾರ ತಪ್ಪು. ಕೊರೋನ ರೋಗದೊಂದಿಗೆ ತಪ್ಪಾದ ರೀತಿಯಲ್ಲಿ ಗ್ರಹಿಕೆ ಇರಿಸಬಾರದು. ಹೆಚ್ಚು ಜನರಿಗೆ ಕೊರೋನ ತಗುಲಲಿ ಎಂದು ಭಾವಿಸಬಾರದೆಂದು, ಇದು ಅನೈತಿಕ ಎಂದು ಅವರು ಹೇಳಿದರು.

ವ್ಯಾಕ್ಸಿನ್ ರೋಗ ಪ್ರತಿರೋಧಕವಾಗಿದ್ದು ರೋಗವನ್ನು ಪ್ರತಿರೋಧಿಸಲು ವ್ಯಾಕ್ಸಿನ್ ಕಂಡು ಹುಡುಕುವುದು ಒಂದು ಹಂತಕ್ಕೆ ತಲುಪಿದಾಗ ಮಾತ್ರ ಸಾಧ್ಯವಾಗಲಿದೆ. ಶೇ.95ರಷ್ಟು ಮಂದಿಗೆ ವ್ಯಾಕ್ಸಿನ್ ಸಿಕ್ಕಾಗ ಶೇ.5ರಷ್ಟು ಮಂದಿಯಲ್ಲಿ ರೋಗ ಪ್ರತಿರೋಧಕ ಶಕ್ತಿ ಬರಬಹುದು. ಪೊಲಿಯೋ ರೋಗದಲ್ಲಿ ಇದು ಶೇ.80ರಷ್ಟಿದೆ ಎಂದು ಅವರು ತಿಳಿಸಿದರು.

ಆರ್ಜಿತ ಪ್ರತಿರೋಧ ಜನರನ್ನು ರೋಗದಿಂದ ಮುಕ್ತಗೊಳಿಸಲಿಕ್ಕಾಗಿದೆ. ಅಲ್ಲದೆ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಿರುವುದಲ್ಲ. ಸಾರ್ವಜನಿಕ ಆರೋಗ್ಯ ಇತಿಹಾಸದಲ್ಲಿ ಯಾವ ಹಂತದಲ್ಲಿಯೂ ಅಂಟು ರೋಗವನ್ನು ಪ್ರತಿರೋಧಿಸಲು ಆರ್ಜಿತ ಪ್ರತಿರೋಧ ಸಾಮರ್ಥ್ಯವು ಬಳಕೆಯಾಗಿಲ್ಲ. ಅಪಾಯಕಾರಿ ವೈರಸ್ ಹೆಚ್ಚು ಹರಡಲು ಬಿಡುವುದು ಅನ್ಯಾಯವಾಗಿದೆ. ಇದು ಪ್ರತಿರೋಧ ಮಾರ್ಗವಲ್ಲ. ಕೊರೋನ ವಿರುದ್ಧ ಹೇಗೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಬಹುದು ಎಂದು ಮಾಹಿತಿ ಅಭಾವ ಇರುವುದನ್ನೂ ಅದಾನೊ ಬೆಟ್ಟು ಮಾಡಿದರು.

ಪ್ರತಿರೋಧ ಶಕ್ತಿ ಎಷ್ಟೇ ಬಲಿಷ್ಠವಾಗಿದ್ದರೂ ಈ ಶಕ್ತಿ ದೇಹದಲ್ಲಿ ಎಷ್ಟು ದಿನ ಇರುತ್ತದೆ ಎಂಬುದು ತಿಳಿದಿಲ್ಲ ಎಂದರು. ಹೆಚ್ಚಿನ ದೇಶಗಳ ಜನಸಂಖ್ಯೆಯ ಶೇ.10ಕ್ಕಿಂತ ಕಡಿಮೆ ಮಂದಿಗೆ ಕೊರೋನ ರೋಗ ತಗುಲಿದೆ. ಕೊರೋನ ಎದುರಿಸಲು ಮಾಂತ್ರಿಕ ವಿದ್ಯೆಯಿಲ್ಲ. ಶಾರ್ಟ್‌ಕಟ್ ರೀತಿಗಳಿಲ್ಲ. ಸಮಗ್ರ ದಾರಿ ಮಾತ್ರ ಇರುವುದು. ಅದರ ವಿರುದ್ಧ ಎಲ್ಲ ಆಯುಧಗಳನ್ನು ಎತ್ತಿಹಿಡಿದು ಹೋರಾಡಬೇಕೆಂದು ಅದಾನೊ ಹೇಳಿದರು.