ಬಲಪಂಥೀಯತೆ: ಭಾರತ, ಅಮೆರಿಕ, ಹಂಗೆರಿ, ಬ್ರೆಝಿಲ್

0
1792

ಇತ್ತೀಚೆಗೆ ಬಿಬಿಸಿ ವೆಬ್‍ಸೈಟ್‍ನಲ್ಲಿ ಪ್ರೊಫೆರ್ ರಿಚರ್ಡ್ ಯಂಗ್ಸ್ ಲೇಖನ ಬರೆದಿದ್ದರು.  ಶ್ರೀಮಂತ-ಬಡ ದೇಶಗಳೆಂಬ ವ್ಯತ್ಯಾಸವಿಲ್ಲದೆ ಜಗತ್ತಿನಲ್ಲಿ ವ್ಯಾಪಿಸಿಕೊಂಡ ತೀವ್ರ ಬಲಪಂಥೀಯ ರಾಜಕೀಯ ಸ್ಥಿತ್ಯಂತರಗಳನ್ನು ಅದರಲ್ಲಿ ಅವರು ಸೂಚಿಸಿದ್ದರು. ಬಹುಶಃ ಅವರು ನಿರ್ಣಾಯಕ ಎನ್ನಬಹುದಾದ ಕೆಲವು ವಿಷಯಗಳನ್ನು ಅದರಲ್ಲಿ ಗುರುತಿಸಿದ್ದಾರೆ ಎನ್ನಬಹುದು. ಅಂದರೆ ಹೊಸ ಬಲಪಂಥೀಯವಾದಿ ಸಂಘಗಳು ಮತ್ತು ಅದರ ನಾಯಕರು ಹೆಚ್ಚು ಬಲಶಾಲಿಗಳಾಗಿ, ಅಧಿಕಾರ ವನ್ನು ನೇರವಾಗಿ ತಮ್ಮ ಕೈಗೆ ತೆಗೆದುಕೊಳ್ಳುವುದರಲ್ಲಿ ಹೇಗೆ ಯಶಸ್ಸು ಪಡೆದಿದ್ದಾರೆ ಮತ್ತು ಅವರನ್ನು ಬೆಂಬಲಿಸುವ ಸಾಮಾನ್ಯ/ಬಡವರ್ಗಗಳ ಧಾರಾಳಿ ತನದ ಕುರಿತ ವಸ್ತುಸ್ಥಿತಿಯನ್ನು ರಿಚರ್ಡ್ ಲೇಖನದಲ್ಲಿ ಮುಂದಿಟ್ಟಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ರಿಚರ್ಡ್ ಯಂಗ್ಸ್ ಬ್ರೆಝಿಲಿನ ಬೆಳೆವಣಿಗೆಗಳನ್ನು ಎತ್ತಿ ತೋರಿಸುತ್ತಾರೆ. ಅಲ್ಲಿ ಬಲಪಂಥೀಯ ಅಭ್ಯರ್ಥಿ ಇತ್ತೀಚೆಗೆ ಗೆದ್ದರು. ಜೇರ್ ಬೊಲ್‍ಸೊನಾರೊ ತುಂಬ ದಿಢೀರನೇ ಉಷ್ಣವಲಯದ ಟ್ರಂಪ್ ಎಂಬ ಖ್ಯಾತಿಯೊಂದಿಗೆ ಉದಯಿಸಿದ ಮಾಜಿ ಸೈನಿಕಾಧಿ ಕಾರಿ. ಅವರ ಹಿಂದೆ ಅಲ್ಲಿನ ಬಲಿಷ್ಠ ಸಾಮಾಜಿಕ ಆಂದೋಲನಗಳು ನಿಂತಿದ್ದವು. ಇಂದು ಇಂತಹ ಮಧ್ಯಮ ವರ್ಗೀಯರ ಸಂಘಟನೆಗಳು ಬ್ರೆಝಿಲ್ ಮಾತ್ರವಲ್ಲ ಪೋಲೆಂಡ್‍ನಿಂದ ಹಿಡಿದು ಥಾಯ್ಲೆಂಡ್, ಭಾರತಗಳವರೆಗೆ ಬಲವರ್ಧಿಸಿರುವು ದನ್ನು ಜಗತ್ತು ನೋಡುತ್ತಿದೆ ಎಂದು ರಿಚರ್ಡ್ ಬರೆಯುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಹಲವು ದೇಶಗಳಲ್ಲಿ ತೀವ್ರ ಬಲಪಂಥೀಯವಾದಿ ರಾಜ ಕಾರಣಿಗಳು ಆಕರ್ಷಕ ನಾಯಕರಾಗಿ ಹೊಳೆಯು ತ್ತಿದ್ದಾರೆ. ಭಾರತದಲ್ಲಿ ನರೇಂದ್ರ ಮೋದಿ, ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಂಗೆರಿಯ ಪ್ರಧಾನಿ ವಿಕ್ಟರ್ ಒರ್ಬಾನೊ ಇವರಲ್ಲಿ ಮುಖ್ಯ ವ್ಯಕ್ತಿಗಳು. ಬ್ರೆಝಿಲ್ ಎಡಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ದಿಲ್ಮ ರೂಸಫ್‍ರನ್ನು ಹೊರದಬ್ಬಿದ ಕ್ಷೋಭೆ, ಯುಕ್ರೇನ್‍ನಲ್ಲಿ ಬಲಗೊಂಡ ತೀವ್ರ ರಾಷ್ಟ್ರೀಯವಾದ, ಥಾಯ್ಲೆಂಡಿನಲ್ಲಿ ಮೂಲ ಭೂತವಾದಿ ಸಾಮಾಜಿಕ ಸಂಘಟನೆಗಳ ನೇತೃತ್ವ ದಲ್ಲಿ ಸೇನೆಯ ಆಡಳಿತಕ್ಕೆ ಬೆಂಬಲ ನೀಡುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಹೋರಾಟ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿ ಸುತ್ತಿರುವ ಹಿಂದುತ್ವ ರಾಷ್ಟ್ರೀಯತಾವಾದಿಗಳು ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವ, ಇವೆಲ್ಲದ್ದರಲ್ಲಿ ನಾಗರಿಕ ಸಮಾಜ ವಹಿಸಿದ ಪಾತ್ರದ ಕುರಿತು ರಿಚರ್ಡ್ ಬೆಟ್ಟು ಮಾಡುತ್ತಾರೆ. ನಾಗರಿಕ ಸಮಾಜ ಎಂದು ಕರೆಯುವ ಜನವಿಭಾಗವನ್ನು ಹಿಂದೆಲ್ಲ ಲಿಬರಲ್, ಮಾನವಹಕ್ಕುಗಳನ್ನು ಬೆಂಬಲಿ ಸುವವರು, ಪ್ರಜಾಪ್ರಭುತ್ವ ರಕ್ಷಣೆ, ಅಲ್ಪಸಂಖ್ಯಾತ ಸಂರಕ್ಷಣೆ ಮೊದಲಾದ ಪದಾವಳಿಯೊಂದಿಗೆ ಜೋಡಿಸಲಾಗುತ್ತಿತ್ತು.

ಆದರೆ, ಇಂದಿನ ನಾಗರಿಕ ಸಮಾಜ ವ್ಯತ್ಯಸ್ತ ಆಶಯಗಳು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಇರಿಸಿಕೊಂಡು ವಿಭಜಿಸಲ್ಪಡುತ್ತಿದೆ. ಇದು ಅತಿ ಶೀಘ್ರಗತಿಯಲ್ಲಿ ಜನಾಂಗೀಯ ಬಲಪಂಥೀಯ ಆಶಯಗಳಿಗೆ ಬೇರೂರಲು ಅವಕಾಶ ಸೃಷ್ಟಿಸಿದೆ. ತಳವರ್ಗದ ಜನರು ಕೂಡ ಮಧ್ಯಮವರ್ಗ ಕೇಂದ್ರಿತ ರಾಜಕೀಯದ ಸಂಚಿಗೆ ಬಲಿ ಬೀಳುತ್ತಿರು ವುದು ಇಂದಿನ ಬಹುದೊಡ್ಡ ವಿಷಮ ಸ್ಥಿತಿ ಯಾಗಿದೆ. ಭೂಪ್ರದೇಶ ಮತ್ತು ಸಂಸ್ಕೃತಿಯಲ್ಲಿ ವ್ಯತ್ಯಾಸ ಇದ್ದರೂ ಈ ನವೀನ ಬಲಪಂಥೀಯ ಸಂಘಟನೆಗಳು ಒಂದೇ ರೀತಿ ಪರಂಪರಾಗತ ಮೌಲ್ಯಗಳನ್ನೇ ಹಂಚುತ್ತಿವೆ. ವಿಶ್ವಾಸ, ಸಾಮು ದಾಯಿಕತೆ, ರಾಷ್ಟ್ರೀಯತಾ ವಾದ, ವಲಸೆ ವಿರುದ್ಧ ಆಕ್ರೋಶ, ಭಿನ್ನ ಲಿಂಗಿಗಳೊಂದಿಗಿನ ತಾರತಮ್ಯತೆ. ಮಹಿಳೆಯರನ್ನು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸುವ ಸಂಕಲ್ಪ ಇತ್ಯಾದಿಗಳು ಅವರ ಪ್ರಚಾರಗಳಲ್ಲಿ ಬಹಿರಂಗವೂ ಆಗುತ್ತಿದೆ. ಈ ಸಂಘಟನೆಗಳು ಕನ್ಸರ್ವೇಟಿವ್ ಸಿವಿಲ್ ಸೊಸೈಟಿ ಎನ್ನುವ ನೆಲೆಯಲ್ಲಿ ವಿಘಟಿಸುತ್ತವೆ. ಆದರೂ ಈ ನಾಗರಿಕ ಸಮಾಜದ ಮುಖ್ಯ ರಾಜಕೀಯದ ಒಳಗೆ ಕೂಲಂಕಷವಾಗಿ ಕೆಲಸ ಮಾಡುವವರು ಪ್ರಜಾಪ್ರಭುತ್ವದೊಂದಿಗೆ ಆಸಕ್ತಿ ಹೊಂದದವರು ಎನ್ನುವುದು ಕೂಡ ಇನ್ನೊಂದು ಗಮನಾರ್ಹ ವಿಚಾರವಾಗಿದೆ.

ಇದನ್ನು ಹೇಗೆ ಜಾರಿಗೊಳಿಸಬಹುದು ಎಂಬುದಕ್ಕೆ ಭಾರತದಲ್ಲಿ ಉದಾಹರಣೆಯಿದೆ. ದೇಶದಲ್ಲಿ ಮತ್ತು ರಾಜಕೀಯದಲ್ಲಿ ಭಾರತದಷ್ಟು ವೈವಿಧ್ಯತೆ ಇರುವ ಇನ್ನೊಂದು ದೇಶ ಬೇರಿಲ್ಲ. ಇದನ್ನು ಕಲಹಿಸುವ ನಾಗರಿಕ ಸಮಾಜವಾಗಿ ರಿಚರ್ಡ್ ಉದಾಹರಿಸುತ್ತಾರೆ.

ರಿಚಡ್ರ್ಸ್ ಲೇಖನದಲ್ಲಿ ಮಹಿಳೆಯು ಹಕ್ಕು ಹೋರಾಟಗಳಿಗೆ ಸಂಬಂಧಪಟ್ಟ ವಿಚಾರವಿದೆ. ಮಹಿಳಾ ವಿರೋಧಿ ನಾಯಕರು ಅಧಿಕಾರಕ್ಕೆ ಬಂದು ಮಹಿಳಾ ಸಮುದಾಯದ ಹೋರಾಟದ ಮತ್ತು ಪ್ರತಿಭಟನೆಯ ಮೂಲಕ ಮುಂದೆ ಬಂದಾಗ ಅದೇ ವರ್ಗವನ್ನು ಅಂದರೆ ಮಹಿಳೆ ಯರನ್ನು ಉಪಯೋಗಿಸಿ  ಅವರ ಹೋರಾಟ ವನ್ನು  ವಿಫಲಗೊಳಿಸಲಾಗುತ್ತದೆ. ಬಹುಶಃ ಎಲ್ಲ ಹೋರಾಟಗಳನ್ನು ವಿಫಲಗೊಳಿಸುವುದಕ್ಕೆ ಆಧುನಿಕ ಜಗತ್ತು ಆಯ್ದುಕೊಂಡ ರೀತಿಯಿದು ಎನ್ನಬಹುದು. ಅಂದರೆ ಮಹಿಳಾ ಶಕ್ತಿಯನ್ನು ತಮಗೆ ಅನುಕೂಲ ವಾಗುವಂತೆ ಪರಿವರ್ತಿಸಲಾಗುತ್ತದೆ. ನಂತರ ವೋಟುಗಳನ್ನು ಪಡೆದು ಅಧಿಕಾರಕ್ಕಿರುವ ದಾರಿ ಗಳನ್ನು ಸುಲಭ ಸಾಧ್ಯಗೊಳಿಸುತ್ತಾರೆ. ಭಾರತದ ಚುನಾವಣೆಗಳಲ್ಲಿ ಮಹಿಳಾ ಮತಗಳು ಬಲಪಂಥೀ ಯತಾ ವಾದಿಗಳಿಗೆ ಶಕ್ತಿ ತುಂಬಿದ್ದು ಒಂದು ವಸ್ತುಸ್ಥಿತಿ ಎನ್ನಬಹುದು. ನವೀನ ಜಾಗೃತಿಯೂ ಹೀಗೆ ಕೆಲವೊಮ್ಮೆ ಅಪಾಯದ ಕರಗಂಟೆ ಯಾಗಬಹುದು.

ಇಪ್ಪತ್ತನೆ ಶತಮಾನದಲ್ಲಿ ಮಾರುಕಟ್ಟೆಯ ಅಲೆ ಅಡಿಗೆ ಮನೆಗೂ ಬಂದಪ್ಪಳಿಸಿತು. ಮಾರು ಕಟ್ಟೆಯಿಂದ ಬಿಡುಗಡೆ ಸಾಧ್ಯ, ವಿದ್ಯಾವಂತ ಮಹಿಳೆಯರು ಕೂಡ ಈ ವಾದಕ್ಕೆ ಮಾರುಹೋದರು. ಸೌಲಭ್ಯಗಳನ್ನು ಸ್ವಾತಂತ್ರ್ಯ ವೆಂದು ವ್ಯಾಖ್ಯಾನಿಸುವ ರೀತಿ ಸೃಷ್ಟಿಯಾಯಿತು. ಗೃಹಿಣಿಯರನ್ನು ಉದ್ದೇಶಿಸಿ ಮಹಿಳಾ ವಾದಿ ಬರಹಗಾರರು, ಮಹಿಳಾ ಹಕ್ಕು ಹೋರಾಟಗಾರರು ಮುಂದೆ ಬಂದರು. ಅವರ ಬರಹಗಳಲ್ಲಿ ಮಹಿಳಾ ಸ್ವಾತಂತ್ರ್ಯ ಹಕ್ಕುಗಳು ವಿಜೃಂಭಿಸಿದ್ದವು. ಈ ಅಧ್ಯಯನ ಹೋರಾಟಗಳೆಲ್ಲವೂ ಅಕಾಡಮಿಕ್ ಮಟ್ಟಕ್ಕೆ ಸೀಮಿತವಾಗಿದ್ದೂ ಇವೆ. ಇನ್ನಷ್ಟು ಭ್ರಾಮಕ ವಿಷಯಗಳಲ್ಲಿ ಕರಗಿ ಹೋಗಿದ್ದೂ ಇವೆ. ಕೆಲವರಂತೂ ಮಹಿಳಾ ಹೋರಾಟಗಳನ್ನೇ ತಮ್ಮ ಪರ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ಇದಕ್ಕೊಂದು ಉತ್ತಮ ಉದಾಹರಣೆ ಬ್ರೆಝಿಲ್‍ನದ್ದಾಗಿದೆ. ಕಟು ಮಹಿಳಾ ವಿರೋಧಿ ಯೆಂಬ ಹೆಸರು ಪಡೆದಿದ್ದ ಬೊಲ್ಸೊನ್ ಅಧಿಕಾರಕ್ಕೆ ಬರದಂತೆ ಅಲ್ಲಿನ ಮಹಿಳೆಯರು ಸಂಘಟಿಸಿ ಬೀದಿಗಿಳಿದು ನಡೆಸಿದ ಹೋರಾಟ ಆ ನಾಡಿನ ಇತಿಹಾಸದಲ್ಲಿಯೇ ಬಹುದೊಡ್ಡ ಮಹಿಳಾ ಪ್ರತಿ ಭಟನೆ ಎಂದು ಕರೆಯಲ್ಪಟ್ಟಿತ್ತು. ಇಂತಹ ಹೋರಾಟವೇ ಅಂತಿಮವಾಗಿ ಈ ಮಹಿಳಾ ಹೋರಾಟ ಬೊಲ್ಸನೊರೊಗೆ ಉಪಕೃತವಾಗಿ  ಬದಲಾಯಿತು. ಜನರು ಚುನಾವಣೆಯಲ್ಲಿ ದಿಲ್ಮಾ ರೂಸೆಫ್‍ರನ್ನು ಗೆಲ್ಲಿಸಿದರೂ ಮಾಜಿ ಸೇನಾಧಿಕಾರಿ ಯಾದ ಬೊಲ್ಸೊನಾರೊರ ಮಹಿಳಾ ಅಧ್ಯಕ್ಷೆಯಾದ ಡೆಲ್ಮಾರನ್ನು ಇಂಪೀಚ್‍ಮೆಂಟ್ ಮಾಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾದರು.

ಭಾರತದಲ್ಲಿಯೂ ಮಧ್ಯಮ ವರ್ಗವು ಬಲಪಂಥೀಯವಾದಿಗಳ ಕೈಗೊಂಬೆಗಳಾಗುತ್ತಿದ್ದಾರೆ. ಕಾರ್ಪೊರೇಟ್ ಶಕ್ತಿಗಳ ಬೆಂಬಲದಿಂದ ಜನರನ್ನು ವಿಭಜಿಸಿ ದೊಡ್ಡ ವೋಟು ಬ್ಯಾಂಕನ್ನು ಯಶಸ್ವಿ ಯಾಗಿ ಸೃಜಿಸಿದರು. ತತ್ಪರಿಣಾಮವಾಗಿ ಬ್ರೆಝಿಲಿ ನಂತೆ ಭಾರತದಲ್ಲಿಯೂ ಅಧಿಕಾರದ ಗದ್ದುಗೆ ಕೈವಶವಾಗಿದೆ. ಹಂಗೆರಿಯಲ್ಲಿ, ಜೊತೆಗೆ ಅಮರಿಕ ದಲ್ಲಿಯೂ ಬಲಪಂಥೀಯತೆಯನ್ನು ಬಹಳ ಬಲಶಾಲಿಯಾಗಿ ಹರಡಲು ಮಧ್ಯಮ ವರ್ಗವನ್ನು ಏಣಿಯನ್ನಾಗಿ ಬಳಸಲಾಗಿದೆ.