ಅಲಿಗಡದಲ್ಲಿ ರಸ್ತೆ ಬದಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ

0
656

ಅಲಿಗಡ, ಜು. 26: ಅಲಿಗಡದಲ್ಲಿ ರಸ್ತೆ ಬದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಅನುಮತಿಯಿಲ್ಲದ ಧಾರ್ಮಿಕ ಕಾರ್ಯಕ್ರಮಗಳನ್ನು ರಸ್ತೆ ಬದಿ ನಡೆಸಬಾರದೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದೆ. ಮಂಗಳವಾರ, ಶನಿವಾರಗಳಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಮಹಾಆರತಿ ಕಾರ್ಯಕ್ರಮ ರಸ್ತೆಯಲ್ಲಿ ನಡೆಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಷೇಧವನ್ನು ಜಾರಿಗೊಳಿಸಿದರು.

ಸಾರ್ವಜನಿಕ ರಸ್ತೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಅಲಿಗಡದ ಶಾಂತಿ ವಾತಾವರಣವನ್ನು ಕೆಡಿಸುತ್ತದೆ ಎಲ್ಲ ಧರ್ಮ ವಿಭಾಗದವರಿಗೂ ಆರಾಧನಾ ಸ್ವಾತಂತ್ರ್ಯ ಇದೆ. ಆರಾಧಾನಾಲಯಗಳಲ್ಲಿ ,ಧಾರ್ಮಿಕ ಕೇಂದ್ರಗಳಲ್ಲಿ ಅದನ್ನು ನಡೆಸಬೇಕು. ರಸ್ತೆಯ ಬದಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಾನೂನು ವ್ಯವಸ್ಥೆಗೆ ಹಾನಿಕರವಾಗಿದೆ. ಇದಕ್ಕೆ ಸಂಬಂಧಿಸಿ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಮತ್ತು ಸ್ಥಳೀಯಾಡಳಿತ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಅಲಿಗಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಬಿ ಸಿಂಗ್ ತಿಳಿಸಿದರು.

ಇತ್ತೀಚೆಗೆ ರಾಮಾಯಣ ಓದಿದ್ದಕ್ಕೆ ಐವರು ಮುಸ್ಲಿಂ ಯುವಕರನ್ನು ಕ್ರೂರವಾಗಿ ಥಳಿಸಲಾಗಿತ್ತು.