ಸೌಹಾರ್ದ ಇಫ್ತಾರ್ ಕೂಟ| ಧರ್ಮವು ಸಮಾಜ ಕಟ್ಟಿದರೆ ಅಧರ್ಮವು ಸಮಾಜವನ್ನು ಒಡೆಯುತ್ತದೆ; ರಿಯಾಝ್ ರೋಣ

0
280

ಸನ್ಮಾರ್ಗ ವಾರ್ತೆ

ಬೆಂಗಳೂರು “ಧರ್ಮವು ಸಮಾಜ ಕಟ್ಟುವಂತಹ ಕೆಲಸಕ್ಕೆ ಪ್ರೇರಣೆ ನೀಡಿದರೆ ಅಧರ್ಮವು ಸಮಾಜ ಒಡೆಯುವಂತಹ ಕಾರ್ಯಕ್ಕೆ ಪ್ರೇರಣೆ ನೀಡುತ್ತದೆ. ಆದ್ದರಿಂದ ನಾವೆಲ್ಲರೂ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಅದುವೇ ನಿಜವಾದ ಧರ್ಮ ಎಂದು ಜ.ಇ.ಹಿಂದ್ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ಮಸ್ಜಿದೆ ಉಮರ್ ಫಾರೂಕ್ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಯಶವಂತಪುರ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಾಮಾಜಿಕ ಮುಖಂಡ ಸಿಂಗಾಪುರ್ ವೆಂಕಟೇಶ್ ಮಾತನಾಡಿ “ನಮ್ಮ ಹಿರಿಯರು ಯಾವುದೇ ಧರ್ಮದವರಾಗಿರಲಿ ಪರಸ್ಪರ ಕೂಡಿ ಬಾಳುತ್ತಿದ್ದರು ಆದರೆ ಇಂದು ಕೆಲವರು ನಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ, ದ್ವೇಷಿಸುವವರು ಕಟ್ಟಕಡೆಗೆ ಸೋಲನ್ನು ಅನುಭವಿಸುತ್ತಾರೆ, ನಾವೆಲ್ಲರೂ ಪರಸ್ಪರ ಪ್ರೀತಿಸುವವರಾಗಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಜ.ಇ.ಹಿಂದ್ ಸ್ಥಳೀಯ ಅಧ್ಯಕ್ಷ ಸುಹೇಲ್ ಅಹ್ಮದ್, ಮಸ್ಜಿದೆ ಉಮರ್ ಫಾರೂಕ್ ಕಾರ್ಯದರ್ಶಿ ರಿಯಾಝ್ ಪಾಷಾ, ಮುಂತಾದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here