ನನ್ನ ಪ್ರಭು ನನ್ನಿಂದ ಸಂತುಷ್ಠನಾಗಬೇಕು

0
1560

ಡಾ| ಫರ್‌ಹತ್‌ ಹಾಶ್ಮಿ


ಅಲ್ಲಾಹನ ಧರ್ಮವನ್ನು ಕಲಿಯುವಾಗ ನಿಮ್ಮ ದಿನದ ಹಲವಾರು ಕೆಲಸಗಳು ತಪ್ಪಿ ಹೋಗಬಹುದು. ಆದರೆ ನೀವು ಸರಿಯಾಗಿ ಚಿಂತಿಸಿ ನೋಡಿದರೆ ನಿಮಗೆ ಅಗತ್ಯವಿಲ್ಲದವುಗಳು ಮಾತ್ರ ತಪ್ಪಿ ಹೋಗಿರಬಹುದು. ಅಗತ್ಯವಿರುವಂತಹದ್ದು ಖಂಡಿತ ನಿಮಗೆ ಸಿಗುತ್ತಿರ ಬಹುದು. ಅಲ್ಲಾಹನ ಗ್ರಂಥವನ್ನು ಕಲಿತು ಅರ್ಥಮಾಡಿಕೊಂಡರೆ ಸಿಗುವ ಸುಖವು ಲೋಕದ ಯಾವುದೇ ವಸ್ತುವಿನಿಂದ ಸಿಗಲಾರದು. ಇದನ್ನು ನೀವು ಸ್ವತಃ ಅನುಭವಿಸುವಿರಿ.
ನೀವೇ ಗಮನಿಸಿರಬಹುದು, ಈ ಲೋಕದಲ್ಲಿ ಮನೆ, ಮಕ್ಕಳು, ಉಡುಗೆ-ತೊಡುಗೆಗಳು, ಸಂಪತ್ತು-ಅನ್ನಪಾನೀಯಗಳು ಇವೆಲ್ಲವನ್ನೂ ಪಡೆದವರು ಕೂಡಾ ಯಾವುದೋ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಎಲ್ಲಿಯೋ ಯಾವುದೋ ವಿಷಯದಲ್ಲಿ ಕೊರಗುತ್ತಿದ್ದಾರೆ. ಆ ಕೊರತೆ ಇದಾಗಿದೆ: ನಾವು ಈ ಲೋಕಕ್ಕೆ ಬಂದಿದ್ದೇವೆ. ಸೃಷ್ಟಿಕರ್ತನು ಕೊಟ್ಟ ಎಲ್ಲ ಅನುಗ್ರಹಗಳನ್ನು ಉಪಯೋಗಿಸುತ್ತಿದ್ದೇವೆ. ಆದರೆ ಆತನ ಹಕ್ಕು ತೀರಿಸಲಿಲ್ಲ. ಹೌದು, ಅಲ್ಲಾಹನು ನಮಗೆ ಎಷ್ಟೆಲ್ಲಾ ಉಪಕಾರ ಮಾಡಿದನು. ನಮ್ಮನ್ನು ಮನುಷ್ಯನಾಗಿ ಸೃಷ್ಟಿಸಿದನು. ಮನುಷ್ಯನಿಗೆ ಬೇಕಾಗಿರುವ ಎಲ್ಲ ಅನುಗ್ರಹಗಳನ್ನು ನೀಡಿದನು. ಕಣ್ಣು, ಕೈಕಾಲುಗಳು, ಆಲೋಚಿಸುವ ಮನಸ್ಸು, ಬುದ್ಧಿ, ಆರೋಗ್ಯ, ಯೌವನ, ಗಾಳಿ, ನೀರು, ಬೆಳಕು… ಸರ್ವ ಸವಲತ್ತುಗಳನ್ನು ನೀಡಿದನು. ನಮ್ಮನ್ನು ಮುಸ್ಲಿಮರನ್ನಾಗಿ ಮಾಡಿದನು. ಮುಹಮ್ಮದ್(ಸ)ರ ಉಮ್ಮತ್‌ ಆಗಿ ಮಾಡಿದನು. ಅವನ ಧರ್ಮದ ಜ್ಞಾನ ನೀಡಲಿಕ್ಕಾಗಿ ಕುರ್‌ಆನನ್ನು ನಮಗಾಗಿ ತೆರೆದಿರಿಸಿದನು. ಈಗ ಎಲ್ಲರಿಗಿಂತ ಮೊದಲು ಅವನ ಹಕ್ಕು ತೀರಿಸ ಬೇಕಾಗಿದೆ. ಆದ್ದರಿಂದ ಜೀವನದ ನಿಜವಾದ ಉದ್ದೇಶ ಕೇವಲ ಅಲ್ಲಾಹನನ್ನು ಖುಷಿ ಪಡಿಸುವುದಾಗಿದೆ. ಆತನನ್ನು ಸಂತೋಷ ಗೊಳಿಸುವುದು ಲೋಕದ ಎಲ್ಲ ಕಾರ್ಯಗಳಿಗಿಂತ ಬಹಳ ಮುಖ್ಯವಾದುದಾಗಿದೆ. ಯಾವಾಗ ನಮ್ಮ ಗುರಿ ಅಲ್ಲಾಹನನ್ನು ಸಂಪ್ರೀತಿ ಗೊಳಿಸುವುದಾಗಿರುವುದೋ ಆಗ ನಮಗೆ ಯಾವುದೇ ವಿಷಯದ ಕುರಿತು ಬೇಸರವಿರಲಾರದು. ಕೇವಲ ಒಂದೇ ಒಂದು ಆಗ್ರಹ, “ನನ್ನ ಪ್ರಭು ನನ್ನಿಂದ ಸಂತುಷ್ಠನಾಗಬೇಕು ಎಂದು ಮಾತ್ರ…