ನೀವು ಆಮೆಗಳಾಗಿದ್ದರೆ ಇಂಗ್ಲೆಂಡನ್ನು ಕಚ್ಚಿ ಎಳೆದು ಸಮುದ್ರದಲ್ಲಿ ಮುಳುಗಿಸುತ್ತಿದ್ದಿರಿ….

0
277

ಸನ್ಮಾರ್ಗ ವಾರ್ತೆ

✍️ ಶೈಕ್ ಮುಹಮ್ಮದ್ ಕೆ.

ಭಾರತದಲ್ಲಿ ಬ್ರಿಟಿಷ್ ಆಡಳಿತ ಪ್ರಬಲವಾಗಿದ್ದ ಕಾಲ. ಅವರನ್ನು ಸೂರ್ಯವು ಅಸ್ತಮಿಸಿದ ಸಾಮ್ರಾಜ್ಯದ ಒಡೆಯರೆಂದು ಕರೆಯಲಾಗುತ್ತಿತ್ತು. ಅವರಿಗೆ ತಮ್ಮ ವಸಾಹತುಗಳಿಂದ ವಿಶೇಷ ವಿರೋಧ ಅಥವಾ ಬೆದರಿಕೆಗಳಿರಲಿಲ್ಲ. ಅಂಥ ಕಾಲದಲ್ಲಿ ಜಮಾಲುದ್ದೀನ್ ಅಫ್ಘಾನಿಯವರು ಏಶ್ಯದ ವಿದೇಶಿ ಆಡಳಿತದ ವಿರುದ್ಧ ತೀವ್ರ ಸವಾಲೆಸೆದರು.

ಅವರು 1938ರಲ್ಲಿ ಅಫ್ಘಾನಿಸ್ತಾನದಲ್ಲಿ ಹುಟ್ಟಿದ್ದರು. ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಪಡೆದಿದ್ದ ಅವರು ವಿದೇಶಿಯರಿಗೆ ತಲೆಬಾಗುತ್ತಿರುವ ಸ್ಪದೇಶಿಯರನ್ನು ನೋಡಿ ಮರುಗಿದರು. ವಿದೇಶಿ ಆಳ್ವಿಕೆಯನ್ನು ಅವರು ದ್ವೇಷಿಸಿದರು. ಅವರು ಜನರಲ್ಲಿ ಸ್ವಾತಂತ್ರ್ಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಅವರನ್ನು ಸಾಮ್ರಾಜ್ಯ ಶಾಹಿತ್ಯದ ವಿರುದ್ಧ ಹೋರಾಡುವಂತೆ ಹುರಿದುಂಬಿಸಿದರು.

ಭಾರತಕ್ಕೆ ಬಂದ ಅವರು ಜನರನ್ನು ಸಂಘಟಿಸಿ ಅವರೊಡನೆ ಹೀಗೆಂದರು: ನನ್ನ ಭಾರತೀಯ ಬಾಂಧವರೇ, ಕೋಟಿಗಟ್ಟಲೆ ಜನರಿರುವ ನೀವೆಲ್ಲರೂ ನೊಣಗಳಾಗಿದ್ದರೆ ಕೇವಲ ಸಾವಿರಾರು ಮಂದಿಯಿರುವ ಬ್ರಿಟಿಷರ ಕಿವಿಗಳು ಮುಚ್ಚಿಕೊಳ್ಳುವಂತೆ ನಿಮ್ಮ ರೆಕ್ಕೆ ಬಡಿತದಿಂದ ಮಾಡಬಹುದಾಗಿತ್ತು. ಅವರ ನಾಯಕ ಮಿಸ್ಟರ್ ಗಾಡ್‌ಸ್ಟನ್‌ರನ್ನು ಕಂಗೆಡಿಸಬಹುದಾಗಿತ್ತು. ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ನಿಮ್ಮನ್ನು ದೇವನು ಆಮೆಗಳಾಗಿ ಮಾಡಿದ್ದರೆ, ಸಮುದ್ರವನ್ನು ಭೇದಿಸಿ ಇಂಗ್ಲೆಂಡನ್ನು ಸುತ್ತುವರಿದು ಅದನ್ನು ಕಚ್ಚಿ ಎಳೆದು ಸಮುದ್ರದಲ್ಲಿ ಮುಳುಗಿಸಲು ನಿಮಗೆ ಸಾಧ್ಯವಾಗುತ್ತಿತ್ತು. ತರುವಾಯ ನೀವು ಸ್ವತಂತ್ರರಾಗಿ ಭಾರತಕ್ಕೆ ಮರಳಬಹುದಾಗಿತ್ತು.

ಅಫ್ಘಾನಿಯ ಭಾಷಣವನ್ನು ಕೇಳಿ ಹಲವರು ಅತ್ತು ಬಿಟ್ಟರು. ಅವರು ಕೂಡಲೇ ಹೀಗೆಂದರು, “ಅಳಬೇಡಿ, ಸ್ವಾತಂತ್ರ್ಯದ ಹಾದಿಯಲ್ಲಿ ಮುಗುಳ್ನಗೆಯಿಂದ ಮರಣವನ್ನು ಸ್ವಾಗತಿಸಲು ಸಿದ್ಧರಿಲ್ಲದವರಿಗೆ ಬಾಳ್ವೆಯಿಲ್ಲ. ಅರ್ಧ ಶತಮಾನ ಗುಲಾಮನಾಗಿರುವುದಕ್ಕಿಂತ ಅರೆ ನಿಮಿಷ ಸ್ವತಂತ್ರನಾಗಿ ಬಾಳುವುದೇ ಉತ್ತಮ.