ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ಮನೆ ನಿರ್ಮಿಸಿ ಮಾನವೀಯತೆ ಮೆರೆದ ತೆಲಂಗಾಣದ ಪೊಲೀಸ್ ಇನ್ಸ್ ಪೆಕ್ಟರ್

0
472

ಸನ್ಮಾರ್ಗ ವಾರ್ತೆ

ತೆಲಂಗಾಣ: ವಾರಂಗಲ್ ಜಿಲ್ಲೆಯ ಲಕ್ಷ್ಮೀನಾರಾಯಣಪುರಂ ಗ್ರಾಮದ 70 ವರ್ಷದ ಬಂಡೀಪೆಲ್ಲಿ ರಾಜಮ್ಮ ಅವರಿಗೆ ಹೊಸ ವರ್ಷದ ಆರಂಭವು ಉತ್ಸಾಹ ತಂದಿದೆ. ಅದಕ್ಕೆ ಕಾರಣ ಪೋಲೀಸ್ ಇನ್ಸ್ ಪೆಕ್ಟರ್ ಓರ್ವರ ಸಹಕಾರದಿಂದ ಪುಟ್ಟ ಮನೆಯೊಂದು ನಿರ್ಮಾಣಗೊಂಡಿದೆ.

ಕಳೆದ ವರ್ಷದ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡು ನಿರ್ಗತಿಕಳಾಗಿದ್ದ ರಾಜಮ್ಮಳಿಗೆ ಪಾಲಕುರ್ತಿ ಸಬ್ ಇನ್ಸ್‌ಪೆಕ್ಟರ್ ಗುಂದ್ರತಿ ಸತೀಶ್ ಅವರು ದಾನಿಗಳ ನೆರವಿನಿಂದ ಮನೆಯೊಂದನ್ನು ಕಟ್ಟಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.‌

ಅಕ್ಟೋಬರ್‌ನಲ್ಲಿ ತೆಲಂಗಾಣದಲ್ಲಿ ಪ್ರವಾಹದ ಸಂದರ್ಭದಲ್ಲಿ ಸತೀಶ್ ರಾಜಮ್ಮ ಅವರನ್ನು ಭೇಟಿಯಾಗಿದ್ದರು. ರಾಜಮ್ಮನಂತಹ ನಿವಾಸಿಗಳನ್ನು ರಕ್ಷಿಸುವ ಮತ್ತು ಪುನರ್ವಸತಿ ನೀಡುವಲ್ಲಿ ಅವರು ನಿರತರಾಗಿದ್ದರು. ಅವರ ಮನೆಗಳು ನಾಶವಾಗಿದ್ದವು ಮತ್ತು ಅವರನ್ನು ಸ್ಥಳಾಂತರಗೊಳಿಸಲಾಗಿತ್ತು. ರಾಜಮ್ಮ ಅವರ ಪರಿಸ್ಥಿತಿಯನ್ನು ಉತ್ತಮಪಡಿಸುವವರೆಗೆ ಸರ್ಕಾರಿ ಆಶ್ರಯಕ್ಕೆ ಸ್ಥಳಾಂತರಿಸಿದ್ದರು.

ರಾಜಮ್ಮ ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಬಡತನದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಆಕೆಯ ಸೊಸೆ ಮತ್ತು ಮೊಮ್ಮಗಳು ಇಬ್ಬರೂ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದರೆ, ಆಕೆಯ ಮಗ ವಿಕಲಾಂಗ ವ್ಯಕ್ತಿಯಾಗಿದ್ದರಿಂದ ಅವಳನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಅವಳ ಮಗ ಅವಳನ್ನು ತ್ಯಜಿಸಿದ್ದನು.

ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ರವರು, ರಾಜಮ್ಮನ ಅವಸ್ಥೆಯನ್ನು ಕಂಡು, ಹೊಸ ಮನೆ ಕಟ್ಟಲು ಯೋಜನೆ ಹಾಕಿ, ಆಕೆಯ ಹಳೆಯ ಮನೆಯನ್ನು ನೆಲಸಮ ಮಾಡಿಸಿದರು ಮತ್ತು ದಾನಿಗಳ ಸಹಾಯದಿಂದ 1,60,000 ರೂ.ಗಳ ವೆಚ್ಚದಲ್ಲಿ ಒಂದು ಕೊಠಡಿಯುಳ್ಳ ಮನೆಯನ್ನು ಮೂರು ತಿಂಗಳೊಳಗೆ ಹೊಸದನ್ನು ನಿರ್ಮಿಸಿದರು. ವೆಚ್ಚದ ಅರ್ಧದಷ್ಟು ಹಣವನ್ನು ತನ್ನ ಕೈಯಿಂದಲೇ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪೊಲೀಸ್ ಅಧಿಕಾರಿಯಾಗಿದ್ದರು ಕೂಡಾ ಸತೀಶ್ ರವರು ಅನೇಕ ವರ್ಷಗಳಿಂದ ಸಮಾಜ ಸೇವೆ ಮಾಡುವ ‘ಹೆಲ್ಪಿಂಗ್ ಹ್ಯಾಂಡ್ಸ್’ ಎಂಬ ಸಾಮಾಜಿಕ ಸಂಘಟನೆಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

ರಾಜಮ್ಮ ಅವರ ನೆರವಿಗೆ ಬಂದವರಲ್ಲಿ ಪಂಚಾಯತ್ ರಾಜ್ ಸಚಿವ ಎರ್ರಾಬೆಲ್ಲಿ ದಯಾಕರ್ ರಾವ್ ಅವರ ಪತ್ನಿ ಉಷಾ ಸೇರಿದ್ದಾರೆ. ಅವರು ಸ್ವಲ್ಪ ಹಣದ ಜೊತೆಗೆ ಅಕ್ಕಿ ಮತ್ತು ಇತರ ದಿನಸಿ ಸಾಮಗ್ರಿಗಳನ್ನು ರಾಜಮ್ಮ ಳಿಗೆ ನೀಡಿದ್ದಾರೆ.

ತೆಲಂಗಾಣ ಪೊಲೀಸರು ತಮ್ಮ ಸಹೋದ್ಯೋಗಿಯ ಕೆಲಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.