ಜಾರ್ಜ್ ಫ್ಲಾಯ್ಡ್ ಹತ್ಯೆ ವಂಶೀಯ ಪಾಪ; ಇದರ ವಿರುದ್ಧ ಜಗತ್ತು ಕಣ್ಣು ಮುಚ್ಚಬಾರದು- ಪೋಪ್ ಫ್ರಾನ್ಸಿಸ್

0
736

ಸನ್ಮಾರ್ಗ ವಾರ್ತೆ

ವ್ಯಾಟಿಕನ್ ಸಿಟಿ,ಜೂ.4: ಅಮೆರಿಕದ ಕಪ್ಪುವರ್ಗದ ಜಾರ್ಜ್ ಫ್ಲಾಯ್ಡ್‌ರನ್ನು ಪೊಲೀಸರು ಕೊರೊಳು ಅದುಮಿ ಕೊಲೆ ಮಾಡಿದ ಘಟನೆಯನ್ನು ಪೋಪ್ ಫ್ರಾನ್ಸಿಸ್ ಖಂಡಿಸಿದ್ದು, “ಇದು ವಂಶೀಯ ಪಾಪ ಇದರ ವಿರುದ್ಧ ಜಗತ್ತು ಕಣ್ಣುಮುಚ್ಚಿ ಕೂರಬಾರದು” ಎಂದು ಅವರು ಹೇಳಿದರು. ಬುಧವಾರ ವ್ಯಾಟಿಕನ್‍ನ ಚರ್ಚ್‍ನಲ್ಲಿ ಪ್ರತಿವಾರ ಪ್ರಾರ್ಥನೆಗೆ ಸೇರಿದ ವಿಶ್ವಾಸಿಗಳನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.

ಅಮೆರಿಕದಲ್ಲಿ ಶಾಂತಿ ಮರುಸ್ಥಾಪನೆಗೆ ಮುಂದೆ ಬರಬೇಕೆಂದು ಅವರು ಕರೆ ನೀಡಿದರು. ಪವಿತ್ರವಾದ ಮನುಷ್ಯನ ಜೀವ. ಅದನ್ನು ಸಂರಕ್ಷಿಸಲು ಯಾವುದೇ ರೀತಿಯ ಜನಾಂಗೀಯತೆಯನ್ನು ಮೀರಿ ನಿಲ್ಲುವುದಕ್ಕೆ ನಾವು ಸಿದ್ಧರಿರಬೇಕು.

ಜನಾಂಗೀಯ ಅಸಹಿಷ್ಣುತೆಯ ಜೊತೆಗೆ ಸ್ವಯಂ ನಾಶಕ್ಕೆ, ಪರಾಜಯಕ್ಕೆ ದಾರಿಮಾಡಿಕೊಡುವ ಅಕ್ರಮಗಳು ನಗರದಲ್ಲಿ ನಡೆಯುತ್ತಿವೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕೆಂದು ಅವರು ನುಡಿದರು.

ಜಾರ್ಜ್ ಫ್ಲಾಯ್ಡ್ ಸಾವು ದಾರುಣವಾದುದು. ಅವರಿಗೂ ಜನಾಂಗೀಯ ದಾಳಿಗೆ ಒಳಗಾದ ಎಲ್ಲರಿಗೂ ನಾನು ಪ್ರಾರ್ಥಿಸುವೆನು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲಯಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.