ಮಲ್ಯರಿಗಾಗಿ ಬ್ಯಾಂಕುಗಳು ಕಾನೂನುಗಳನ್ನು ಗಾಳಿಗೆ ತೂರಿತ್ತು: ಬ್ರಿಟೀಷ್ ನ್ಯಾಯಾಧೀಶ

0
1206

ಲಂಡನ್: ಕಿಂಗ್ ಫಿಶರ್ ಏರ್‍ಲೈನ್ಸ್‍ಗೆ ಸಾಲ ನೀಡಲು ಭಾರತದ ಬ್ಯಾಂಕುಗಳು ಕಾನೂನುಗಳನ್ನು ಗಾಳಿಗೆ ತೂರಿತ್ತು ಎಂದು ಬ್ರಿಟನ್ ನ್ಯಾಯಾಧೀಶರೊಬ್ಬರು ತಿಳಿಸಿದ್ದಾರೆ. ಮದ್ಯ ದೊರೆ ವಿಜಯ್ ಮಲ್ಯ ಒಂಬತ್ತು ಸಾವಿರ ಕೋಟಿ ವಂಚಿಸಿ ದೇಶವನ್ನು ತೊರೆದ ಪ್ರಕರಣದ ವಿಚಾರಣೆಗೆ ಅವರನ್ನು ಭಾರತಕ್ಕೆ ಒಪ್ಪಿಸಬೇಕೆಂಬ ಭಾರತದ ಮನವಿಯನ್ನು ಪರಿಗಣಿಸಿದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನ ನ್ಯಾಯಾಧೀಶ ಎಮ್ ಆಬಾಟ್ ಈ ಆಭಿಪ್ರಾಯ ಹೊರಗೆಡಹಿದ್ದಾರೆ. ಮಲ್ಯ ವಿರುದ್ದ ಸಾಕ್ಷಿಗಳು ಅನೇಕ ಕಡೆ ಬಹಿರಂಗವಾಗಿಯೇ ಇದೆ. ಅದನ್ನೆಲ್ಲಾ ಜೋಡಿಸಿದಾಗ ನಿಜವಾದ ಚಿತ್ರಣ ದೊರೆಯಲಿದೆ ಎಂದೂ ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಬ್ಯಾಂಕುಗಳೇ ಕಾನೂನುಗಳನ್ನು ಉಲ್ಲಂಘಿಸಿದೆಯಾದ್ದರಿಂದ ಈ ವಿಷಯದಲ್ಲಿ ಕೆಲ ಬ್ಯಾಂಕ್ ನೌಕರರ ವಿರುದ್ದದ ಪ್ರಕರಣಗಳ ವಿವರ ನೀಡುವಂತೆಯೂ ಅವರು ಆದೇಶಿಸಿದ್ದಾರೆ.
ನಿನ್ನೆ ಮಲ್ಯ ಪರ ಹಾಜರಾದ ವಕೀಲ ಕ್ಲೆಯರ್ ಮೋಂಡ್ ಗೋಮರಿ ಪ್ರಾಸಿಕ್ಯೂಶನ್ ಸಮರ್ಪಿಸಿದ ದಾಖಲೆಗಳು ಅಂಗೀಕಾರ್ಹವಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಪ್ರಾಥಮಿಕ ನೋಟದಲ್ಲಿಯೇ ಇದರಲ್ಲಿ ವಂಚನೆ ನಡೆದಿರುವುದು ಸ್ಪಷ್ಟವಾಗುತ್ತದೆ ಎಂದೂ ಹೇಳಿದರು. ನ್ಯಾಯಾಲಯದಲ್ಲಿ ವಾದ ಅಂತಿಮ ಹಂತದಲ್ಲಿರುವಾಗ ಮಲ್ಯ ಕೋರ್ಟಿಗೆ ಹಾಜರಾಗಿದ್ದರು. ವಾದ ಮುಗಿದ ಬಳಿಕ ಅವರನ್ನು ಭಾರತಕ್ಕೆ ಬಿಟ್ಟು ಕೊಡುವ ಬಗ್ಗೆ ತೀರ್ಪು ಪ್ರಕಟಿಸಲಿದೆ.