ಕುರ್ ಆನ್ ಕಂಠಪಾಠ ಮಾಡಿ ಸಾಧನೆಗೈದ 15 ರ ಹರೆಯದ ಬಾಲಕಿ ಸ್ವಾಲಿಹಾ

0
2440

ಸನ್ಮಾರ್ಗ ವಾರ್ತೆ

ಕೊಡಗು: ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರ್ ಆನ್ ಅನ್ನು ಕಂಠಪಾಠ ಮಾಡುವ ಮೂಲಕ ಹದಿನೈದರ ಹರೆಯದ ಬಾಲಕಿ ಸ್ವಾಲಿಹಾ ದಾವೂದ್ ಅಪೂರ್ವ ಸಾಧನೆಯನ್ನು ಮಾಡಿದ್ದಾಳೆ.

ಕೊಡಗು ಜಿಲ್ಲೆಯ ಕುಶಾಲನಗರದ ಕಿಂಗ್ಸ್ ವೇ ಸಂಸ್ಥೆಯ ಮಾಲಕ ಎಂ. ಎಂ. ದಾವೂದ್ ಹಾಗೂ ಸೌಧಾ ದಂಪತಿಗಳ ಪುತ್ರಿ ಸ್ವಾಲಿಹಾ ಅಲ್ಲಿನ ಫಾತಿಮಾ ಕಾನ್ವೆಂಟ್‌ನಲ್ಲಿ ಆರನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, ಅರಬಿ ಮದ್ರಸದಲ್ಲೂ ಕಲಿಕೆಯಲ್ಲಿ ಜಾಣೆ ಎನಿಸಿದ್ದಳು.

ಮಗಳಿಗೆ ಕುರ್ ಆನ್ ಕಂಠಪಾಠ ಮಾಡಬೇಕೆಂಬ ಬಯಕೆ ಇದ್ದುದ್ದನ್ನು ಗಮನಿಸಿದ ಪೋಷಕರು, ಸ್ವಾಲಿಹಾಳನ್ನು ಕಳೆದ ಮೂರು ವರ್ಷಗಳ ಹಿಂದೆ ಕಾಸರಗೋಡಿನ “ಅಲ್‌ ಬಯಾನ್” ಹೆಣ್ಣು ಮಕ್ಕಳ ಇಸ್ಲಾಮಿಕ್ ವಿದ್ಯಾಸಂಸ್ಥೆಗೆ ಸೇರಿಸಿದರು.

ಅಧ್ಯಾಯಗಳನ್ನು ಕಂಠಪಾಠ ಮಾಡಲು ಪ್ರಾರಂಭಿಸಿದ ಸ್ವಾಲಿಹಾ ಮೂರು ವರ್ಷಗಳಲ್ಲಿ ಆರು ನೂರು ಪುಟಗಳ ಬೃಹತ್ ಗ್ರಂಥದ ಎಲ್ಲಾ ನೂರ ಹದಿನಾಲ್ಕು ಅಧ್ಯಾಯಗಳನ್ನೂ ಕಂಠ ಪಾಠ ಮಾಡುವ ಮೂಲಕ ವಿದ್ಯಾಸಂಸ್ಥೆಗೂ ಮುಸ್ಲಿಂ ಸಮಾಜಕ್ಕೂ ಕೀರ್ತಿ ತಂದಿದ್ದಾಳೆ.

ಅಲ್‌ಬಯಾನ್ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಬಾಲಕಿ ಸ್ವಾಲಿಹಾ “ಹಾಫಿಝಾ” ಪದವಿ ಸ್ವೀಕರಿಸಿದ್ದಾಳೆ. ತನ್ನ ಉನ್ನತ ವ್ಯಾಸಂಗವನ್ನು ಅದೇ ಸಂಸ್ಥೆಯಲ್ಲಿ ಮುಂದುವರಿಸಿದ್ದಾಳೆ.